ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈತ್ರಿ ನಾಟಕದಲ್ಲಿ ಮಕ್ಕಳ ಕಲರವ

Rashmi Kasaragodu
Updated On : 9 May 2014, 11:47 am

ಮೈಸೂರು: ರಂಗಾಯಣದ ಚಿಣ್ಣರ ಮೇಳದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಶನಿವಾರ ಜಗದೀಶ್ ಮನವಾರ್ತೆ ಹಾಗೂ ಕೃಷ್ಣಕುಮಾರ್ ನಾರ್ಣಕಜೆ ನಿರ್ದೇಶನದ ಮೈತ್ರಿ ನಾಟಕ ಪ್ರದರ್ಶನವಾಯಿತು. ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳ ಒಂದು ತಂಡ ಮೈತ್ರಿ ನಾಟಕವನ್ನು ಅಮೋಘವಾಗಿ ಅಭಿನಯಿಸಿದರು.


ಜ್ಯೋತಿಷ್ಯಾಸ್ತ್ರ ಕಾರ್ಯಾಗಾರ
ಮೈಸೂರು: ಶ್ರೀ ಮಾಯಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರವು ಮೇ 11ರ ಮಧ್ಯಾಹ್ನ 2.30ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ 11ನೇ ಜ್ಯೋತಿಷ್ಯಾಸ್ತ್ರ ಕಾರ್ಯಾಗಾರ ಆಯೋಜಿಸಿದೆ. ಶ್ರೀರಂಗಪಟ್ಟಣದ ವಿದ್ವಾನ್ ಭಾನುಪ್ರಕಾಶ್ ಶರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖಾಸಗಿ ವಾಹಿನಿ ನಿರೂಪಕಿ ಶಿಲ್ಪ ಕಿರಣ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಡಾ.ಶೆಲ್ವಪಿಳ್ಳೈ ಐಯ್ಯಂಗಾರ್ ವಿಶೇಷ ಉಪನ್ಯಾಸ ನೀಡುವರು. ಮಾಹಿತಿಗೆ ಮೊ. 9945415341 ಸಂಪರ್ಕಿಸಿ.
ಕಾಮೆಡ್- ಕೆ ಬಸ್ ವೇಳಾಪಟ್ಟಿ
ಎನ್ಐಇ ತಾಂತ್ರಿಕ ಸಂಸ್ಥೆಯಲ್ಲಿ ಮೇ 11ಕ್ಕೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು, ಪೋಷಕರು ನಗರ ಪ್ರದೇಶದಿಂದ ಕಾಲೇಜಿಗೆ ಬರಲು ನಗರ ಸಾರಿಗೆ ಬಸ್ನ ವೇಳಾಪಟ್ಟಿ ಪ್ರಕಟಿಸಲಾಗಿದೆ. ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 9.15, 11.25, ಮಧ್ಯಾಹ್ನ 1.25ಕ್ಕೆ ಬಸ್ ನಂ. 119 ಹೊರಡುತ್ತದೆ. ಹೂಟಗಳ್ಳಿಗೆ ಪ್ರತಿ 5 ನಿಮಿಷಕ್ಕೆ ಒಂದರಂತೆ ಬಸ್ ನಂ.266 ಹೊರಡಲಿದೆ. ಹೂಟಗಳ್ಳಿಯಿಂದ ಆಟೋ ವ್ಯವಸ್ಥೆ ಇದೆ. ಇನ್ಫೋಸಿಸ್ಗೆ ಪ್ರತಿ ಐದು ನಿಮಿಷಕ್ಕೊಂದು ಬಸ್ ನಂ.116 ಹೊರಡುತ್ತದೆ. ಅಲ್ಲಿಂದಲೂ ಆಟೋ ವ್ಯವಸ್ಥೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಸಿಡಿ ಬಿಡುಗಡೆ
ಪರಂಪರೆ ಸಂಸ್ಥೆಯು ಡಾ.ಪಾವಗಡ ಪ್ರಕಾಶರಾವ್ ಅವರ ಶ್ರೀ ಶಂಕರಾಚಾರ್ಯ ದರ್ಶನದ ನಾಲ್ಕು ವಿಡಿಯೋ ಸಿಡಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮೇ 11ರ ಸಂಜೆ 6ಕ್ಕೆ ಮೈಸೂರಿನ ವಾಸುದೇವಾಚಾರ್ಯ ಭವನದಲ್ಲಿ ಆಯೋಜಿಸಿದೆ. ಕೈಗಾರಿಕೋದ್ಯಮಿ ಎಚ್.ವಿ. ಸುಬ್ರಹ್ಮಣ್ಯ ಸಿಡಿ ಲೋಕಾರ್ಪಣೆಗೊಳಿಸುವರು. ಶಾಸನ ತಜ್ಞ ಎಚ್.ಎಂ. ನಾಗರಾಜರಾವ್ ಸಿಡಿಗಳ ಕುರಿತು ಮಾತನಾಡುವರು. ಮೇ 15ರ ಸಂಜೆ 6ಕ್ಕೆ ಢಿಢಿಢಿ.ಠಛ್ಠಛಟಠಛ್ಠಜಟಣಡ್ಟ್ಠ್ಡ.್ಟ್ಠ್ಜ ಜಾಲತಾಣಕ್ಕೆ ಚಾಲನೆ ನೀಡಲಿದ್ದು, ಮೇ 11 ರಿಂದ 18ರವರೆಗೆ ಪಾವಗಡ ಪ್ರಕಾಶರಾವ್ ಅವರು ಉಪನ್ಯಾಸ ನೀಡುವರು.
ಬುದ್ಧ ಜಯಂತಿ
ಮಹಾಬೋಧಿ ಮೈತ್ರಿಮಂಡಲವು ಮೇ 11ರ ಸಂಜೆ 6ಕ್ಕೆ ಸರಸ್ವತಿಪುರಂ ಮಹಾಬೋಧಿ ಕಾರ್ಯ ವಿದ್ಯಾರ್ಥಿನಿಲಯದ ಬುದ್ಧ ವಿಹಾರದಲ್ಲಿ ಬುದ್ಧ ಜಯಂತಿ ಆಯೋಜಿಸಿದೆ. ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ ಧಮ್ಮದೇಸನ ಮಾಡುವರು. ಮಹಾಬೋಧಿ ಸಂಸ್ಥೆ ನಿರ್ದೇಶಕ ಧಮ್ಮ ಲೋಕ ಭಂತೇಜಿ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಚ್.ಎಸ್. ಉಮೇಶ್ ಉಪನ್ಯಾಸ ನೀಡುವರು. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ವರಪ್ಪ ಅತಿಥಿಯಾಗಿ ಭಾಗವಹಿಸುವರು.
ಅಕ್ಯುಪ್ರೆಷರ್ ಚಿಕಿತ್ಸೆ
ಸ್ವಸ್ಥ ಸಂಸ್ಥೆಯು ಮೇ 11ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಬೃಂದಾವನ ಬಡಾವಣೆ 12ನೇ ಮುಖ್ಯರಸ್ತೆಯ ಸಂಸ್ಥೆಯಲ್ಲಿ ನೋವು ರಹಿತ ಅಕ್ಯುಪ್ರೆಷರ್ ಚಿಕಿತ್ಸೆ ಆಯೋಜಿಸಿದೆ. ತಲೆನೋವು, ಬೆನ್ನು ನೋವು, ಕುತ್ತಿಗೆ ನೋವು, ಮಧುಮೇಹ, ಮೂತ್ರಪಿಂಡದಲ್ಲಿ ಕಲ್ಲು, ಅಜೀರ್ಣತೆ, ರಕ್ತದೊತ್ತಡ, ಅಸ್ತಮಾ ಮುಂತಾದ ಕಾಯಿಲೆಗೆ ಚಿಕಿತ್ಸೆ ನೀಡಲಿದೆ. ಮೊ. 9632871438 ಸಂಪರ್ಕಿಸಬಹುದು.
ಬೇಸಿಗೆ ಶಿಬಿರ
ಅಕ್ಷಯ ಫೌಂಡೇಷನ್ ಆಯೋಜಿಸಿರುವ ಚಿಣ್ಣರ ಲೋಕ ಬೇಸಿಗೆ ಶಿಬಿರದ ಅಂಗವಾಗಿ ಪೋಷಕರಿಗೆ ಒಂದು ದಿನದ ಕಾರ್ಯಾಗಾರ ಮೇ 11ರ ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿ ಹಿಂಭಾಗದ ಸ್ಕೌಟ್ಸ್, ಗೈಡ್ಸ್ ಮೈದಾನದಲ್ಲಿ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಇತರೆ ವಿದ್ಯಾರ್ಥಿಗಳ ಪೋಷಕರೂ ಭಾಗವಹಿಸಬಹುದು. ನುರಿತ ಮಕ್ಕಳ ಮನೋತಜ್ಞರು ಉಪನ್ಯಾಸ ನೀಡುವರು. ಮೊ. 9986151966 ಸಂಪರ್ಕಿಸಿ.
ಬಂಧಿತರು ಸಿಐಡಿಗೆ
ಮೈಸೂರು: ಇಲವಾಲದಲ್ಲಿ ಪೊಲೀಸರೆ ರು. 2.20 ಕೋಟಿ ಹಣ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕೆಲ ದಿನಗಳ ಹಿಂದೆ ಬಂಧಿಸಿದ್ದ ಲತೀಫ್ ಮತ್ತು ಸತೀಶ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಸಿಐಡಿ ವಶಕ್ಕೆ ಒಪ್ಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement