ರಾಜಸ್ತಾನದ ಕುಶಲತೆಗೆ ಮನಸೋತ ಮೈಸೂರು
ಮೈಸೂರು: ರಾಜಸ್ಥಾನ್ ಆರ್ಟ್ ಆ್ಯಂಡ್ ಕ್ರಾಫ್ಟ್ ಸಂಸ್ಥೆಯು ನಗರದ ನಂಜರಾಜ ಬಹದ್ಧೂರ್ ಛತ್ರದಲ್ಲಿ ಏರ್ಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನವು ಮೆರುಗು ಪಡೆದುಕೊಂಡಿದೆ.
ಮೇ 9 ರಿಂದ 25 ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಂಕೋಲಾ ಪ್ರಿಂಟೆಡ್ ಸ್ಯಾರೀಸ್, ಅಜಾರಕ್ ಪ್ರಿಂಟೆಡ್ ಸ್ಯಾರೀಸ್, ಕಾಟನ್ ಮತ್ತು ಸಿಲ್ಕ್ ಸ್ಯಾರೀಸ್, ಕಟ್ವರ್ಕ್ ಸ್ಯಾರೀಸ್, ಫುಲ್ಕಾರಿ ಸ್ಯಾಂಪ್ ಚಿಕೆನ್ ಎಂಬ್ರಾಯಿಡರಿ, ದಖಾಯ್ ಮತ್ತು ಜಮ್ಧಾನಿ ಸ್ಯಾರೀಸ್, ಏಕತ್, ಮಹೇಶ್ವರಿ ಸ್ಯಾರೀಸ್, ಕಸೂತಿ ಎಂಬ್ರಾಯಿಡರಿ ಮತ್ತು ಕೋಟಾ ಸ್ಯಾರೀಸ್, ಕಂಚಿನ ವಿಗ್ರಹಗಳು, ಪಿಂಗಾಣಿ ವಸ್ತುಗಳು ಕಣ್ಮನ ಸೆಳೆಯುತ್ತಿವೆ.
ಹಾಗೆ ಬಾಟಿಕ್ ಬಂದನಿ ಸ್ಯಾರೀಸ್, ಭಗಲ್ಪುರ್, ಪೂನಾ ಸ್ಯಾರೀಸ್, ಇಳಕಲ್ ಮತ್ತು ಕಾಂಚೀಪುರಂಸಿಲ್ಕ್ ಸ್ಯಾರೀಸ್, ಗದ್ವಾಲ್, ಪಟೋಲಾ ಸ್ಯಾರೀಸ್, ಸೆಮಿ ಪ್ರೀಸಿಯಸ್ ಸ್ಟೋನ್ ಜ್ಯುವೆಲ್ಲರಿ, ಸಿಲ್ವರ್ ಜ್ಯುವೆಲ್ಲರಿ, ಡಿಸೈನರ್ ಜ್ಯುವೆಲ್ಲರಿ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ರೇಷ್ಮೆ ಉದ್ಯಮಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಸಂಸ್ಥೆಯು ಈ ಪ್ರದರ್ಶನವನ್ನು ಭಾರತ ಸರ್ಕಾರದ ಜವಳಿ ಇಲಾಖೆಯ ಡೆವಲಪ್ಮೆಂಟ್ ಕಮಿಷನರ್ ಕಚೇರಿಯ ಸಹಯೋಗದೊಂದಿಗೆ ಆಯೋಜಿಸಿದೆ.