ಮಳೆಗೆ ಶಾಲಾ ಮೈದಾನ ಜಲಾವೃತ
ಪಿರಿಯಾಪಟ್ಟಣ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಎಸ್ಕೆಎಸ್ಟಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಆವರಣ ಸಂಪೂರ್ಣ ಜಲಾವೃತವಾಗಿದ್ದು ಮಕ್ಕಳು ಮಳೆ ನೀರಿನಲ್ಲಿ ಸ್ವಚ್ಛಂದವಾಗಿ ಆಟವಾಡಿದರು. ಶಾಲೆಯ ಆವರಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತೋಡಲಾಗಿರುವ ಪಿಲ್ಲರ್ ಗುಂಡಿಗಳಿಗೂ ನೀರು ತುಂಬಿದ್ದು ಆಡುವ ಮಕ್ಕಳು ಬೀಳುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಪಿಲ್ಲರ್ ಗುಂಡಿಗಳನ್ನು ಮುಚ್ಚಿಸುವ ಅಥವಾ ಅನಾಹುತವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.