ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹೇಶ್ ಬಗ್ಗೆ ಮಾತಾಡೋ ನೈತಿಕತೆ ಇಲ್ಲ: ಮಂಜುನಾಥ್

Rashmi Kasaragodu
Updated On : 12 May 2014, 1:21 am

ಕ.ಪ್ರ.ವಾರ್ತೆ    ಕೆ.ಆರ್. ನಗರ    ಮೇ 11
ಸಾ.ರಾ. ಮಹೇಶ್ ಕ್ಷೇತ್ರದ ಶಾಸಕರಾದ ನಂತರ ನೂರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಅವರಿಗಿಲ್ಲ ಎಂದು ಪುರಸಭಾ ಜೆಡಿಎಸ್ ಸದಸ್ಯ ಉಮೇಶ್, ನಗರ ಜೆಡಿಎಸ್ ಅಧ್ಯಕ್ಷ ಡಿ.ಸಿ. ಮಂಜುನಾಥ್ ತಿಳಿಸಿದ್ದಾರೆ.
ತಮ್ಮ ಶಾಸಕತ್ವದ ಅವಧಿಯುದ್ದಕ್ಕೂ ಪಕ್ಷಭೇದ ಮತ್ತು ಜಾತಿಭೇದವಿಲ್ಲದೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಸಾ.ರಾ. ಮಹೇಶ್ ಅವರ ಜನಪ್ರಿಯತೆ ಸಹಿಸದೆ ಸುಳ್ಳಿನ ಅಪಪ್ರಚಾರದಲ್ಲಿ ತೊಡಗಿರುವ ಜಾಬೀರ್ ಹಣ ನೀಡಿದವರನ್ನು ಓಲೈಸುವ ರಾಜಕಾರಣ ಬಿಡಬೇಕೆಂದು ಅವರು ಸುದ್ಧಿಗೋಷ್ಠಿಯಲ್ಲಿ ಟೀಕಿಸಿದರು.
ಮಿನಿ ವಿಧಾನಸೌಧದ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿಲ್ಲ ಎಂದು ಜಾಬೀರ್ ಆರೋಪಿಸಿದ್ದಾರೆ. ಆದರೆ ಕಾಮಗಾರಿ ನಡೆಯುವ ವೇಳೆ ಹತ್ತಾರು ಬಾರಿ ಸ್ಥಳಕ್ಕೆ ಭೇಟಿ ನೀಡಿದ ಸಾ.ರಾ. ಮಹೇಶ್ ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನ ಹರಿಸಿದ್ದಾರೆ. ವಾಸ್ತವಾಂಶ ತಿಳಿಯದವರು ನೀಡುವ ಹೇಳಿಕೆಗಳಿಗೆ ಅಂತಹ ಮಹತ್ವ ನೀಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಪುರಸಭಾ ಸದಸ್ಯ ಕೆ.ಎಲ್. ಜಗದೀಶ್, ಮಾಜಿ ಅಧ್ಯಕ್ಷ ಡಿ. ಕಾಂತರಾಜು, ಸಾ.ರಾ. ಬಳಗದ ವ್ಯವಸ್ಥಾಪಕ ಕಲ್ಲಹಳ್ಳಿ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement