ಮೂವರು ಸರಗಳ್ಳರ ಬಂಧನ
ಮೈಸೂರು: ಮೂವರು ಸರ ಅಪಹರಣಕಾರರನ್ನು ನಗರದ ಉದಯಗಿರಿ ಮತ್ತು ನಜರ್‌ಬಾದ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನಂಜನಗೂಡಿನ ಅಬ್ದುಲ್ ಫಜಲ್ ಅ. ಚಾರ್ಲಿ, ರಾಜೀವ್‌ನಗರದ ಸುಹೇಲ್ ಮತ್ತು ಮಂಡಿ ಮೊಹಲ್ಲಾದ ಸಾಜೀದ್ ಬಂಧಿತ ಆರೋಪಿಗಳು. ಇವರಿಂದ 2 ಚಿನ್ನದ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ಉದಯಗಿರಿ ಮತ್ತು ನಜರ್‌ಬಾದ್ ಠಾಣೆಯ ತಲಾ 1 ಪ್ರಕರಣಗಳು ಪತ್ತೆಯಾಗಿದೆ.