ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಂಕರರ ಜನನ ಬಳಿಕ ವೈದಿಕ ಪರಂಪರೆ

Rashmi Kasaragodu
Updated On : 12 May 2014, 1:21 am

ಕ.ಪ್ರ.ವಾರ್ತೆ    ಮೈಸೂರು    ಮೇ 11
ವೈದಿಕ ಪರಂಪರೆ ಏಳಿಗೆಗೆ ಕಾಣದಿದ್ದ ಕಾಲದಲ್ಲಿ ಶಂಕರಾಚಾರ್ಯರು ಮಧ್ಯಾಹ್ನದ ಬಿಸಿಲಿನಂತೆ ಬಂದಿದ್ದಾಗಿ ಶಾಸನ ತಜ್ಞ ಎಚ್.ಎಂ. ನಾಗರಾಜರಾವ್ ಹೇಳಿದರು.
ಪರಂಪರೆ ಸಂಸ್ಥೆಯು ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಪಾವಗಡ ಪ್ರಕಾಶರಾವ್ ಅವರ ಶ್ರೀಶಂಕರಾಚಾರ್ಯ ದರ್ಶನ ನಾಲ್ಕು ವಿಡಿಯೋ ಸಿಡಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಂಕರಾಚಾರ್ಯರ ಜನನದವರೆಗೂ ವೈದಿಕ ಪಂಥ ಹಿನ್ನಡೆ ಅನುಭವಿಸಿತ್ತು. ವೈದಿಕ ಪಂಥದಲ್ಲಿಯೆ ಕಿತ್ತಾಟ ಇತ್ತು. ಆದ್ದರಿಂದ ಏಳಿಗೆ  ಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಶಂಕರಾಚಾರ್ಯರ ಜನನದ ಬಳಿಕ ವೈದಿಕ ಪಂಥಕ್ಕೆ ಮಧ್ಯಾಹ್ನದ ಬಿಸಿಲು ಬಂದಂತೆ ಆಯಿತು ಎಂದರು. ಶಂಕರಾಚಾರ್ಯರ ಕುರಿತ ಸಿಡಿಗಳು ಎಲ್ಲರ ಮನೆಯಲ್ಲೂ ಇರಬೇಕು. ಕೆಲವು ಪೂರ್ವಗ್ರಹ ಪೀಡಿತರು ಇದನ್ನು ವಿರೋಧಿಸಬಹುದು. ಈ ಬಗ್ಗೆ ತಲೆಕೆಡಸಿಕೊಳ್ಳಬೇಕಿಲ್ಲ ಎಂದರು. ಉದ್ಯಮಿ ಎಚ್.ವಿ. ಸುಬ್ರಹ್ಮಣ್ಯ ಸಿಡಿಗಳನ್ನು ಲೋಕಾರ್ಪಣೆಗೊಳಿಸಿದರು. ವಿದ್ವಾನ್ ಡಾ. ಪಾವಗಡ ಪ್ರಕಾಶರಾವ್ ಶ್ರೀ ಶಂಕರಚಾರ್ಯರ ಕುರಿತು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement