ಗರ್ಭಾವಸ್ಥೆ, ತಾಯ್ತನ ವಿಶೇಷ ಕಾರ್ಯಕ್ರಮ
ಮೈಸೂರು: ಅಂತಾರಾಷ್ಟ್ರೀಯ ತಾಯಂದಿರ ದಿನದ ಅಂಗವಾಗಿ ಕ್ರೆಡಿಟ್-ಐ ಸಂಸ್ಥೆಯು ವಾತ್ಸಲ್ಯ ಆಸ್ಪತ್ರೆ ಹಾಗೂ ಇನ್ನರ್ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಹಯೋಗದಲ್ಲಿ ನೆಹರು ನಗರದಲ್ಲಿರುವ ಶಾಲೂಮ್ ಎಜಿ ಹೋಪ್ ಸೆಂಟರ್ನಲ್ಲಿ ಗರ್ಭಿಣಿಯರಿಗೆ ಆರೋಗ್ಯಕರ ಗರ್ಭಾವಸ್ಥೆ ಹಾಗೂ ತಾಯ್ತನ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ವಾತ್ಸಲ್ಯ ಆಸ್ಪತ್ರೆಯ ಡಾ.ಅರ್ಪಿತಾ ಹಾಗೂ ಡಾ.ಸುಪ್ರೀತ್ ಅವರು ಗರ್ಭಾವಸ್ಥೆಯ ಹಂತಗಳನ್ನು ವಿವರಿಸಿದರು. ಕ್ರೆಡಿಟ್ ಐ ಸಂಸ್ಥೆಯ ಡಾ.ಎಂ.ಪಿ. ವರ್ಷ ಮಾತನಾಡಿ, ಆರೋಗ್ಯಕರ ಗರ್ಭಾವಸ್ಥೆಯನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ಹಾಗೂ ಮುಂದಿನ ಪೀಳಿಗೆಯಾದ ತಮ್ಮ ಮಕ್ಕಳ ಆರೋಗ್ಯವನ್ನು ಕಾಯ್ದುಕೊಳ್ಳುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಾಯಂದಿರು ವಹಿಸಬಹುದಾದ ಪಾತ್ರದ ಬಗ್ಗೆ ವಿವರಿಸಿದರು. ರಾಣಿ ಮಂಜುನಾಥ್ ಮಾತನಾಡಿದರು. 35 ಗರ್ಭಿಣಿಯರು ಭಾಗವಹಿಸಿದ್ದರು.