ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾಮರಾಜನಗರದಲ್ಲಿ ಗೆಲವು ನನ್ನದೇ: ಎಆರ್ಕೆ

Rashmi Kasaragodu
Updated On : 13 May 2014, 2:05 am

ಕ.ಪ್ರ.ವಾರ್ತೆ    ನಂಜನಗೂಡು    ಮೇ 12
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇದ್ದು, ಕಾಂಗ್ರೆಸ್ನವರು ವಾಮಮಾರ್ಗದಲ್ಲಿ ಹಣದ ಹೊಳೆ ಹರಿಸಿ ಅಧರ್ಮದಿಂದ ಚುನಾವಣೆ ಗೆಲ್ಲುವ ಪ್ರಯತ್ನ ನಡೆಸಿದ್ದರೂ ಅಂತಿಮವಾಗಿ ಗೆಲವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ನಮೋ ಬ್ರಿಗೇಡ್ ಆಯೋಜಿಸಿದ್ದ ಸಂವಾದ ಹಾಗೂ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಿದವರು ಬಹುತೇಕ ಯುವಕರು. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಉದ್ಧಾರ ಸಾಧ್ಯ ಎಂದು ಅರಿತು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಮೈಸೂರು- ನಂಜನಗೂಡು ಚತುಷ್ಪಥ ರಸ್ತೆ ನಿರ್ಮಾಣದ ಕನಸು ಮಾಜಿ ಭೂ ಸಾರಿಗೆ ಸಚಿವ ಎಂ. ರಾಜಶೇಖರಮೂರ್ತಿ ಅವರದು. ನಂತರ ಎಚ್.ಡಿ. ದೇವೇಗೌಡ ಪ್ರಧಾನಮಂತ್ರಿಯಾದ ಅಧಿಕಾರಾವಧಿಯಲ್ಲಿ ಕಡತಗಳಿಗೆ ಚಾಲನೆ ನೀಡಲಾಗಿತ್ತು. ಆದರೆ ಸಂಸದ ಆರ್. ಧ್ರುವನಾರಾಯಣ ನನ್ನ ಅವಧಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಆದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಳಸಿರುವ ಧ್ರುವನಾರಾಯಣ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ನತದೃಷ್ಟ ರಾಜಕಾರಣಿಯಾದ ನಾನು, ಈ ಚುನಾವಣೆಯಲ್ಲಿ ಸೋತರೆ ಮುಂದಿನ ನೇರ ಚುನಾವಣೆಗಳಿಂದ ದೂರ ಉಳಿದು, ರಾಜಕೀಯದಲ್ಲಿ ಮಾತ್ರ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ವಕೀಲ ಇ. ಮಹದೇವಕುಮಾರ್, ಉಪನ್ಯಾಸಕ ಇ.ಕೆ. ರಾಮಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಂ ಮಹೇಶ್, ಎಸ್ಸಿ ಮೋರ್ಚಾ ಪುರುಷೋತ್ತಮ್, ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement