ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾಮುಂಡಿ ತಪ್ಪಲು ಭೂಮಿ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಮನವಿ

Rashmi Kasaragodu
Updated On : 13 May 2014, 2:04 am

ಕ.ಪ್ರ.ವಾರ್ತೆ    ಮೈಸೂರು    ಮೇ 12
ಸಾಕಷ್ಟು ವಿವಾದಕ್ಕೀಡಾಗಿರುವ ಚಾಮುಂಡಿಬೆಟ್ಟದ ತಪ್ಪಲಿನ ಜಮೀನು ಒಡೆತನದ ಬಗ್ಗೆ ಸರ್ಕಾರ ಆದಷ್ಟು ಬೇಗ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಚಾಮುಂಡಿ ತಪ್ಪಲಿನ ಭೂ ಮಾಲೀಕರ ಸಂಘ ಒತ್ತಾಯಿಸಿದೆ.
ಮೈಸೂರು ಸಂಸ್ಥಾನವು ಭಾರತೀಯ ಒಕ್ಕೂಟದಲ್ಲಿ ವಿಲೀನವಾಗುವುದಕ್ಕಿಂತ ಮುಂಚೆ ಈ ಜಾಗವು ರಾಜರಿಗೆ ಸೇರಿದ್ದಾಗಿತ್ತು. ನಂತರ ನಡೆದ ಮಾತುಕತೆಯಲ್ಲಿ ಯಾರಿಗೆ ಸೇರಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದ್ದರಿಂದ ಇತ್ತೀಚೆಗೆ ಸರ್ಕಾರ ರಚಿಸಿರುವ ನಾರಾಯಣಸ್ವಾಮಿ ಆಯೋಗವು ಎಲ್ಲಾ ಮಾಹಿತಿ ಕ್ರೋಡೀಕರಿಸಿ ಒಡೆತನದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಂಘದ ಸದಸ್ಯ ಸಿ.ಮಹೇಶ್ವರನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
1971 ರಲ್ಲಿ ಕುರುಬಾರಹಳ್ಳಿ ಸರ್ವೆ ನಂ.4ಕ್ಕೆ ಬರವಣಿಗೆ ಆರ್ಟಿಸಿಯಲ್ಲಿ ಭೂ ಸ್ವಾಧೀನದಾರರ ಕಾಲಂನಲ್ಲಿ ಪ್ಯಾಲೇಸ್ ಎಂದು ನಮೂದಿಸಲಾಗಿದ್ದು, ಜಮೀನಿನ ಒಟ್ಟು ವಿಸ್ತೀರ್ಣವನ್ನು 1563 ಎಕರೆ 31 ಗುಂಟೆ ಎಂದು ಉಲ್ಲೇಖಿಸಲಾಗಿದೆ. ಕುರುಬಾರಹಳ್ಳಿ ಜಮೀನು ಮಹಾರಾಜರ ಖಾಸಗಿ ಆಸ್ತಿಗಳು ಎಂಬುದನ್ನು ಸಾಬೀತುಪಡಿಸಿದೆ. ಹಾಗೆ 1965 ರಲ್ಲಿ ಹೊರಡಿಸಲಾದ ಭೂ ಸ್ವಾಧೀನ ಅಧಿಸೂಚನೆಯಲ್ಲಿ ಕುರುಬಾರಹಳ್ಳಿಯ ಜಮೀನು ಅರಮನೆಯ ಮಾಲೀಕತ್ವದ ಜಮೀನು ಎಂದು ಸಿಐಟಿಬಿ ಪರವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ನಮೂದಿಸಿದ್ದಾರೆ. ಈ ಜಮೀನಿನಲ್ಲಿ ಬಡಾವಣೆಗಳನ್ನು ನಿರ್ಮಿಸುತ್ತಿರುವ ಸಲುವಾಗಿ ಭೂ ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ, ಕುರುಬಾರಹಳ್ಳಿಯ ಜಮೀನು ಕೃಷಿ ಭೂಮಿ ಎಂಬ ಉಲ್ಲೇಖ ಇರುವುದಿಲ್ಲ. ಆದ್ದರಿಂದ 1913 ರಿಂದ 1999 ರಿಂದ ಈ ಜಮೀನು ಯಾರ್ಯಾರಿಗೆ ಮಾರಾಟವಾಗಿದೆ ಎಂಬುದನ್ನು ನಾರಾಯಣಸ್ವಾಮಿ ಆಯೋಗ ಕೂಲಂಕುಷವಾಗಿ ಸ್ಪಷ್ಟಪಡಿಸಬೇಕು ಎಂದು ಕೋರಿದರು. ಪದಾಧಿಕಾರಿಗಳಾದ ಮನು, ಪಿ.ಕೋದಂಡರಾಮಯ್ಯ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement