ನಗರದಲ್ಲಿ ಜನಪದ ವಿಚಾರ ಸಂಕಿರಣ ನಾಳೆ
ಮೈಸೂರು: ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಮೇ 14ರ ಸಂಜೆ 4ಕ್ಕೆ ಜನಪದ ಸಂಗೀತದ ಸಾಂಸ್ಕೃತಿಕ ಮಹತ್ವ ಕುರಿತ ವಿಚಾರ ಸಂಕಿರಣವನ್ನು ಸಂಗೀತ ವಿವಿ ಆವರಣದಲ್ಲಿ ಆಯೋಜಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಲಪತಿ ಡಾ.ಸರ್ವಮಂಗಳಾ ಶಂಕರ್ ಅಧ್ಯಕ್ಷತೆ ವಹಿಸುವರು ಎಂದು ಕುಲಸಚಿವ ಡಾ.ವೈ.ಎಸ್. ಸಿದ್ದೇಗೌಡ ತಿಳಿಸಿದ್ದಾರೆ. ಸಂಜೆ 5 ರಿಂದ 7 ರವರೆಗೆ ಜನಪದ ಸಂಗೀತ ಕಲಾ ಪ್ರದರ್ಶನ ಇರುತ್ತದೆ. ತತ್ವಪದ ಗಾಯನವನ್ನು ತಂಬೂರಿ ಜವರಯ್ಯ ಮತ್ತು ತಂಡ, ಜನಪದ ಗೀತೆ ಬನ್ನೂರು ಕೆಂಪಮ್ಮ, ಕಂಸಾಳೆ ಪದಗಳನ್ನು ಕುಮಾರಸ್ವಾಮಿ ಮತ್ತು ತಂಡ ಹಾಗೂ ನೀಲಗಾರರ ಮೇಳವನ್ನು ಮಹಾದೇವು ಹಳೇಪುರ ತಂಡದವರು ನಡೆಸಿಕೊಡುವರು.