ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುಕನ್ಯಾಗೆ ಅನನ್ಯ ಕಲಾ ಕೌಸ್ತುಭ ಪ್ರಶಸ್ತಿ

Rashmi Kasaragodu
Updated On : 13 May 2014, 2:04 am

ಮೈಸೂರು: ವಿದುಷಿ ಸುಕನ್ಯಾ ಪ್ರಭಾಕರ್ ಅವರಿಗೆ ಬೆಂಗಳೂರಿನ ಅನನ್ಯ ಸಂಸ್ಥೆಯು ಅನನ್ಯ ಕಲಾ ಕೌಸ್ತುಭ ಪುರಸ್ಕಾರ ನೀಡಿದೆ.
ಸುಕನ್ಯಾ ಅವರಿಗೆ ಅಮ್ಮನಿಂದಲೇ ಸಂಗೀತ ಮೊದಲ ಪಾಠ, ತಾಯಿ ಲಕ್ಷ್ಮಮ್ಮ ಸ್ವತಃ ಸಂಗೀತ ವಿದುಷಿ ಹಾಗೂ ಆಸ್ಥಾನ ವಿದ್ವಾನ್ ಎನ್. ಚೆನ್ನಕೇಶವಯ್ಯ ಅವರ ಶಿಷ್ಯೆ. ಅತ್ಯಂತ ಸಹಜವೆಂಬ ರೀತಿಯಲ್ಲಿ ಬಾಲ್ಯದಿಂದಲೇ ಸಂಗೀತವು ಅವರಿಗೆ ಒಲಿದಿತ್ತು. ಪ್ರೊ.ಬಿ.ಎಸ್. ವಿಜಯರಾಘವನ್ ಹಾಗೂ ವಿದ್ವಾನ್ ವಿ.ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ ಕೊಡುಗೆ ಎಂಬ ವಿಷಯದಲ್ಲಿ ಬರೆದ ಪ್ರೌಢ ಪ್ರಬಂಧ ಇವರ ಹಿರಿಮೆಯ ಧ್ಯೋತಕ, ಆಕಾಶವಾಣಿ ಮತ್ತು ದೂರದರ್ಶನ ಎ ಟಾಪ್ ಶ್ರೇಣಿಯ ಕಲಾವಿದರು. ಇವರ ಸಾಧನೆ ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನೇಕ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement