ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೈಮಾವತಿಗೆ ತೃತೀಯ ಸ್ಥಾನ

Rashmi Kasaragodu
Updated On : 13 May 2014, 12:42 pm

ಮೈಸೂರು: 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿನಿ ಬಿ.ಯು. ಹೈಮಾವತಿ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಸಂಸ್ಕೃತದಲ್ಲಿ 125ಕ್ಕೆ 125, ಇಂಗ್ಲಿಷ್ನಲ್ಲಿ 99, ಕನ್ನಡದಲ್ಲಿ 100ಕ್ಕೆ 100, ಗಣಿತ 97, ವಿಜ್ಞಾನ 100ಕ್ಕೆ 100 ಹಾಗೂ ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಬಿ.ಕೆ. ಉದಯಕುಮಾರ್ ಹಾಗೂ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್. ಗೌರಮ್ಮ ಅವರ ಏಕೈಕ ಪುತ್ರಿ ಹೈಮಾವತಿ. ನಂತರ ಮಾತಾಡಿದ ಹೈಮಾವತಿ, ಸ್ಟೀವ್ ಜಾಬ್ಸ್ ಜೀವನ ಚರಿತ್ರೆ ಓದಿ ಉತ್ತೇಜಿತಳಾದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುದು ನನ್ನ ಆಸೆ. ಈಗ ಉತ್ತಮ ಅಂಕ ಬಂದಿರುವುದು ಆಸೆಗೆ ಇಂಬು ನೀಡಿದೆ. ಮುಂದೆ ಪಿಯುಸಿಯಲ್ಲಿ ಪಿಸಿಎಂಇ ಆಯ್ಕೆ ಮಾಡಿಕೊಂಡು ನಂತರ ಮೆಕ್ಯಾನಿಕಲ್ ಪ್ರಾಸ್ತಿಟಿಕ್ಸ್ ಓದಬೇಕು. ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಸ್ಟೀವ್ ಜಾಬ್ಸ್ ಹುಟ್ಟುಹಾಕಿದ ಆ್ಯಪೆಲ್ ಸಂಸ್ಥೆ ನನ್ನ ಕನಸಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement