ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಾಧನೆ
ಗೋಪಾಲಸ್ವಾಮಿ ಶಾಲೆ ಶೇ. 82
ಮೈಸೂರು: ಲಕ್ಷ್ಮೀಪುರಂ ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 82 ರಷ್ಟು ಫಲಿತಾಂಶ ಲಭಿಸಿದ್ದು, 12 ಮಂದಿ ಅತ್ಯುನ್ನತ, 38 ಮಂದಿ ಪ್ರಥಮ, 23 ಮಂದಿ ದ್ವಿತೀಯ ಹಾಗೂ 21 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಎಂ.ಪಿ. ಪವನಕುಮಾರ್ 585, ಡಿ.ಎಸ್. ಗಗನ್ 567, ಶಿಶಿರ ವಿ. ಶಾಸ್ತ್ರಿ 562, ಎಸ್. ಚಿರಂತ್ 561, ಪಿ. ಪವಿತ್ರ 560, ಸಿ.ಎಂ. ಭೂಮಿಕಾ 557, ಎಂ. ರಾಜಶೇಖರ್ 549, ಎಸ್. ಅಮೂಲ್ಯ 546, ಎಂ.ಕೆ. ಇಂದುಶ್ರೀ 546, ಎನ್.ಎಸ್. ಶ್ರೀಪ್ರಿಯಾ 541, ಬಿ.ಎಂ. ಪ್ರಿಯಾಂಕ 536, ಆರ್. ತೇಜಗೌಡ 535 ಅಂಕ ಗಳಿಸಿದ್ದಾರೆ.
ಗಂಗೋತ್ರಿ ಶಾಲೆ
ಗಂಗೋತ್ರಿ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದ್ದು, ಪರೀಕ್ಷೆ ಬರೆದ 23 ಮಂದಿಯಲ್ಲಿ 5 ಅತ್ಯುನ್ನತ ಶ್ರೇಣಿ, 8 ಪ್ರಥಮ, 3 ದ್ವಿತೀಯ ಹಾಗೂ 4 ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ವೈ.ಕುಮಾರ್ 580, ಎಸ್.ವಿ. ಸುಪ್ರಿಯಾ 550, ದಿನೇಶ್ಕುಮಾರ್ 549, ಬಿ. ಕವನ 538, ಎನ್. ನೀಮಾ 535 ಅಂಕ ಗಳಿಸಿದ್ದಾರೆ.
ಮಹರ್ಷಿ ಶಾಲೆ ಶೇ. 98.27
ಮಹರ್ಷಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.27 ರಷ್ಟು ಫಲಿತಾಂಶ ಬಂದಿದ್ದು, ಆರ್. ಮನ್ವಿತ್ 596, ಎಂ.ಎನ್. ಮಂಜುನಾಥ 589, ಮಧುರ ಪಿ.ದಿವಾಕರ್ 576, ಕೆ.ಪ್ರಿಯಾಂಕ 562, ಎಂ.ಪಿ.ಯಶಸ್ 561, ಆರ್.ಧನುಷ್ 557, ಸಹಜ ಗಂಡೂರು 557, ಎಂ.ಎಸ್. ಸುಮಂತ್ 556, ಜ್ಯೋತ್ಸನ 553, ಕೆ.ಆರ್. ಗಾನಶ್ರೀ 551, ಎಂ. ಮಂಜುಳಾ 551, ಎಂ.ಕೆ. ಮನು 548, ಯಶವಂತರಾಜು 532 ಅಂಕ ಗಳಿಸಿದ್ದಾರೆ.
ವಿವೇಕಾನಂದ
ಅರವಿಂದನಗರದ ವಿವೇಕಾನಂದ ಎಜುಕೇಷನ್ ಸೊಸೈಟಿಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಲಭಿಸಿದ್ದು, ಎಸ್.ರಂಜಿತಾ ಶೇ.95.4, ವೈ.ಎಸ್.ಚಂದನ್ ಶೇ.91.84, ಪೂಜಾಸುಗಮ್ ಶೇ.88.8, ಸಚ್ಚಿನ್ ವಿ. ಮಯ್ಯ ಶೇ. 85.76 ಅಂಕ ಗಳಿಸಿದ್ದಾರೆ.
ಜೆಎಸ್ಎಸ್ ಶಾಲೆಗೆ ಶೇ. 82
ಲಕ್ಷ್ಮೀಪುರಂನಲ್ಲಿರುವ ಜೆಎಸ್ಎಸ್ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.82 ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 227 ಮಂದಿಯಲ್ಲಿ 187 ಮಂದಿ ಪಾಸಾಗಿದ್ದಾರೆ. ಅವರಲ್ಲಿ 8 ಅತ್ಯುನ್ನತ ಶ್ರೇಣಿ, 55 ಪ್ರಥಮ, 39 ದ್ವಿತೀಯ ಹಾಗೂ 85 ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಬಿ.ಅಕ್ಷತಾ 590, ಶಿವಪ್ರಸಾದ್ 554, ನಿರಂಜನ್ ಕುಮಾರ್ ಪಾರಿಕ್ 546, ಪುನಿತ್ ನಾಗೇಶ್ 542, ಪವನ್ ಪಾಟೀಲ್ 540, ಬಿ. ವಿದ್ಯಾ 538, ಎಚ್.ಎಸ್. ಅರುಣ್ 532 ಅಂಕ ಗಳಿಸಿದ್ದಾರೆ.
ಚಂದನಗೆ ಶೇ. 98.72
ನಗರದ ಸಿಕೆಸಿ ಶಾಲೆ ವಿದ್ಯಾರ್ಥಿನಿ ಎಸ್.ಎಂ. ಚಂದನ ಶರ್ವಾಣಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 98.72 ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 125ಕ್ಕೆ 125, ಗಣಿತ 100ಕ್ಕೂ 100 ಅಂಕ ಪಡೆದಿದ್ದಾರೆ. ಇವರು ಸಿದ್ದರಾಮನಹುಂಡಿ ಗ್ರಾಮದ ಎಸ್. ಮಹದೇವಗೌಡ ಮತ್ತು ಶೋಭಾ ದಂಪತಿ ಪುತ್ರಿ.
ಹೀರಾಗೆ ಶೇ. 92.8
ನಗರದ ರೋಟರಿ ಪಶ್ಚಿಮ ಶಾಲೆಯ ವಿದ್ಯಾರ್ಥಿನಿ ಎಚ್.ಎಸ್. ಹೀರಾ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 92.8 ಅಂಕ ಗಳಿಸಿದ್ದಾರೆ. ಇವರು ಶಿವಣ್ಣ ಮತ್ತು ರೂಪಾ ದಂಪತಿಯ ಪುತ್ರಿ.
ಕುಷ್ವಂತ್ಗೆ ಶೇ. 96.96
ತಿಲಕ್ನಗರದ ಮರಿಮಲ್ಲ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಕುಷ್ವಂತ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 96.96 ಅಂಕ ಗಳಿಸಿದ್ದು, ಇವರು ಎಸ್. ವೆಂಕಟೇಶ್ ಮತ್ತು ಕವಿತಾ ವೆಂಕಟೇಶ್ ದಂಪತಿಯ ಪುತ್ರ.
ಕೆ. ಪುಟ್ಟಸ್ವಾಮಿ ಶಾಲೆ
ಕುಂಬಾರಕೊಪ್ಪಲಿನಲ್ಲಿರುವ ಕೆ.ಪುಟ್ಟಸ್ವಾಮಿ ಪ್ರೌಢಶಾಲೆಗೆ ಶೇ.95 ರಷ್ಟು ಫಲಿತಾಂಶ ಬಂದಿದ್ದು, ಅವರಲ್ಲಿ ಸತ್ಯ 570, ಕೆ. ಸ್ಫೂರ್ತಿ 519, ನೇತ್ರಾವತಿ 502, ಚಂದನ್ 502 ಅಂಕ ಗಳಿಸಿದ್ದಾರೆ.
ಪ್ರಮತಿ ಹಿಲ್ ವ್ಯೂ ಶಾಲೆ ಶೇ. 100
ಕುವೆಂಪುನಗರದಲ್ಲಿರುವ ಪ್ರಮತಿ ಹಿಲ್ವ್ಯೂ ಅಕಾಡೆಮಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 34 ಮಂದಿಯಲ್ಲಿ 7 ಅತ್ಯುನ್ನತ ಶ್ರೇಣಿ, 17 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಕೆ.ಪವಿತ್ರ 597, ಎಸ್. ಸೂರ್ಯ 594, ಎಸ್. ವಿನಯ್ 572, ಎಸ್.ಆರ್. ಅನಘ 543, ಅಭಿಷೇಕ್ ಕೆ. ಮುದ್ಗಲ್ 539, ಎಸ್. ತೇಜಸ್ 538, ಆರ್. ಹಸ್ಮಿತಾ 536 ಅಂಕ ಗಳಿಸಿದ್ದಾರೆ.
ಶಿಶುನಾಳ ಶಾಲೆಗೆ ಶೇ. 96.42
ಉದಯಗಿರಿಯಲ್ಲಿರುವ ಜೆಎಸ್ಎಸ್ ಶಿಶುನಾಳ ಶರೀಫ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 96.42 ಫಲಿತಾಂಶ ಲಭಿಸಿದ್ದು, ಪರೀಕ್ಷೆ ಬರೆದ 56 ವಿದ್ಯಾರ್ಥಿಗಳಲ್ಲಿ 54 ಮಂದಿ ಪಾಸಾಗಿದ್ದಾರೆ. ಅವರಲ್ಲಿ 16 ಪ್ರಥಮ, 15 ದ್ವಿತೀಯ ಹಾಗೂ 23 ಮಂದಿ ತೃತೀಯ ಸ್ಥಾನ ಗಳಿಸಿದ್ದಾರೆ.
ಪೇದೆ ಆತ್ಮಹತ್ಯೆ
ಮೈಸೂರು: ರೈಲಿಗೆ ಸಿಕ್ಕಿ ಮೈಸೂರಿನ ಸಿಎಆರ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು- ಬೆಳಗೊಳ ರೈಲು ನಿಲ್ದಾಣಗಳ ನಡುವೆ ನಡೆದಿದೆ.ಚಾಮರಾಜನಗರ ಜಿಲ್ಲೆ ಪಾಳ್ಯ ಗ್ರಾಮ ನಿವಾಸಿ ಗೋವಿಂದರಾಜು (28) ಆತ್ಮಹತ್ಯೆ ಮಾಡಿಕೊಂಡವರು. ಇವರು ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದು, ಜ್ಯೋತಿನಗರದ ವಸತಿಗೃಹದಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು.ಭಾನುವಾರ ರಾತ್ರಿ ಕರ್ತವ್ಯಕ್ಕೆ ತೆರಳಿದ ಗೋವಿಂದರಾಜು, ಸೋಮವಾರ ಬೆಳಗೊಳ ಬಳಿ ರೈಲು ಹಳಿಗಳ ಮೇಲೆ ಅವರ ಮೃತದೇಹ ಪತ್ತೆಯಾಗಿದೆ. ಶವದ ಬಳಿಯಿದ್ದ ಮೊಬೈಲ್ ಸಹಾಯದಿಂದ ಗೋವಿಂದರಾಜು ಕುಟುಂಬಕ್ಕೆ ಪೊಲೀಸರು ವಿಷಯ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಸಂವಾದ ಇಂದು
ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೇ 14ರ ಬೆಳಗ್ಗೆ 11ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಜಾನಪದ ಕಲಾವಿದರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಉದ್ಘಾಟಿಸಲಿದ್ದು, ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು.
ಕಾರ್ತಿಕೇಯ
ಮೈಸೂರು: ವಿಜಯ ವಿಠಲ ವಿದ್ಯಾಶಾಲೆಯ ಕಾರ್ತಿಕೇಯ ಪಿ.ಮಾಲಿಮಠ ಅವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.6 ಅಂಕ ಗಳಿಸಿದ್ದು, ಕನ್ನಡದಲ್ಲಿ 125ಕ್ಕೆ 123 ಅಂಕ ಪಡೆದಿದ್ದಾರೆ. ಪ್ರಭುಸ್ವಾಮಿ ಮಳಿಮಠ ಹಾಗೂ ಸುಧಾದೇವಿ ಮಳಿಮಠ ಅವರ ಪುತ್ರ.
ಮಹದೇಶ್ವರ ಶಾಲೆ
ಕುಂಬಾರಕೊಪ್ಪಲಿನ ಮಹದೇಶ್ವರ ಶಿಕ್ಷಣ ಸಂಸ್ಥೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಫಲಿತಾಂಶ ಲಭಿಸಿದ್ದು, ಎಸ್. ಕಾರ್ತಿಕ್ ಶೇ.94 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಜೆಎಸ್ಎಸ್
ನಗರದ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.87.5 ಫಲಿತಾಂಶ ಬಂದಿದ್ದು, ಜಿ.ಶಿವಕುಮಾರ್ ಎಂಬ ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಉಳಿದಂತೆ 14 ಮಂದಿ ಪ್ರಥಮ, 8 ಮಂದಿ ದ್ವಿತೀಯ ಹಾಗೂ 5 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಮಹಾವೀರ ಶಾಲೆ
ಸಿದ್ದಾರ್ಥನಗರದಲ್ಲಿರುವ ಮಹಾವೀರ್ ಜೈನ್ ವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ ಬಂದಿದ್ದು, 8 ಉನ್ನತ ಶ್ರೇಣಿ, 26 ಪ್ರಥಮ, 5 ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಆರ್.ಯಶವಂತ್, ರಜತ್ ಜೈನ್ ಶೇ.95 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲ ಬಿ. ಮೋಹನ್ ತಿಳಿಸಿದ್ದಾರೆ.
ವಿದ್ಯಾಜ್ಯೋತಿ ಶಾಲೆ
ಆಲನಹಳ್ಳಿಯಲ್ಲಿರುವ ವಿದ್ಯಾ ಜ್ಯೋತಿ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. 6 ಉನ್ನತ ಶ್ರೇಣಿ, 59 ಪ್ರಥಮ ದರ್ಜೆ, 18 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಸಿ.ರೋಜಾ 560, ಎಸ್.ಎಲ್. ಮನೋಜ್ 557, ಎಚ್.ಎನ್. ವೆಂಕಟೇಶ್ 551, ಬಿ. ಕಾವ್ಯ 547, ಮಂಜುನಾಥ್ 543, ಎಂ. ಪುನೀತ್ 537 ಅಂಕ ಗಳಿಸಿದ್ದಾರೆ.
ಪರಮಹಂಸ ವಿದ್ಯಾನಿಕೇತನ
ಹೆಬ್ಬಾಳಿನಲ್ಲಿರುವ ಶ್ರೀ ಪರಮಹಂಸ ವಿದ್ಯಾನಿಕೇತನ ಶಾಲೆಗೆ ಶೇ.95 ರಷ್ಟು ಫಲಿತಾಂಶ ಲಭಿಸಿದ್ದು, ಒಟ್ಟು ವಿದ್ಯಾರ್ಥಿಗಳಲ್ಲಿ 5 ಉನ್ನತ ಶ್ರೇಣಿ, 19 ಪ್ರಥಮ, 6 ದ್ವಿತೀಯ ಹಾಗೂ 5 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಕಾರ್ಯದರ್ಶಿ ಎಸ್. ಸೌಭಾಗ್ಯ ತಿಳಿಸಿದ್ದಾರೆ.