ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ

Rashmi Kasaragodu
Updated On : 14 May 2014, 1:07 am

ಮೈಸೂರು: ನಗರದ ಎಸ್ಡಿಎಂ-ಐಎಂಡಿ ವತಿಯಿಂದ ಶಾಲಾ ಗ್ರಂಥಾಲಯಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಮಕ್ಕಳ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಯಾದವಗಿರಿಯ ಸುನಂದ ಶಾಲೆ, ಒಡನಾಡಿ ಸಂಸ್ಥೆ, ಗೋಕುಲಂನ ಬಾಪೂಜಿ ಚಿಲ್ಡ್ರನ್ ಹೋಂ ಸಂಸ್ಥೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಸುನಂದ ಶಾಲೆಯ ಕಾರ್ಯದರ್ಶಿ ವಿಶ್ವಾಸ್ ಮಾತನಾಡಿ, ತಮ್ಮ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳ ಸಂಗ್ರಹ ಹೆಚ್ಚಿಸುವಲ್ಲಿ ತಮಗೆ ಅನುಕೂಲವಾಗಲಿದೆ ಎಂದು ತಿಳಿಸಿ, ಎಸ್ಡಿಎಂ ಐಎಂಡಿ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಡನಾಡಿ ಸಂಸ್ಥೆಯ ಪರಶುರಾಮ್ ಮಾತನಾಡಿ, ಈ ಕೊಡುಗೆಯಿಂದ ತಮ್ಮ ಗ್ರಂಥಾಲಯದ ಮೌಲ್ಯ ಹೆಚ್ಚಿದೆ ಎಂದು ಹೇಳಿ, ಕೃತಜ್ಞತೆ ಸಲ್ಲಿಸಿದರು. ಪ್ರಮತಿ ಹಿಲ್ ವ್ಯೂ ಅಕಾಡೆಮಿ ಶಾಲೆಯ ಗ್ರಂಥಪಾಲಕಿ ವಾಣಿಶ್ರೀ, ಎಸ್ಡಿಎಂ-ಐಎಂಡಿ ಸಂಸ್ಥೆಯ ಸಿಬ್ಬಂದಿ ಮತ್ತು ಸ್ವಯಂಸೇವಕ ವಿದ್ಯಾರ್ಥಿಗಳು ಇದ್ದರು.


ವಿಶ್ವನಾಥ್ ಗೆಲವು ಖಚಿತ: ವಿಶ್ವಾಸ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಎಚ್.ವಿಶ್ವನಾಥ್ ಅವರು ಬಾರಿ ಅಂತರದಲ್ಲಿ ಜಯಗಳಿಸುತ್ತಾರೆ ಎಂದು ಮಾಜಿ ಉಪ ಮೇಯರ್ ಮತ್ತು ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ನ ಮಾಜಿ ಅಧ್ಯಕ್ಷ ಎನ್.ಲಕ್ಷ್ಮಣ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವನಾಥ್ ಅವರು ಜಾತ್ಯತೀತವಾಗಿ ಮಾಡಿದ ಅಭಿವೃದ್ಧಿ ಕೆಲಸಗಳೆ ಅವರಿಗೆ ಶ್ರೀರಕ್ಷೆ ಆಗಲಿವೆ. ಜಿಲ್ಲೆಯಲ್ಲಿ ಅವರು ಕೈಗೊಂಡ ಸಾಮಾಜಿಕ ನ್ಯಾಯ ಪರವಾದ ಕಾರ್ಯಕ್ರಮಗಳು ಉತ್ತಮವಾಗಿವೆ. ಸಾರ್ವಜನಿಕರಿಗೆ ಬೇಕಾದ ರಸ್ತೆ, ವಿದ್ಯುತ್, ಆರೋಗ್ಯ ಸೇವೆ, ಶಿಕ್ಷಣ ಮತ್ತು ಕಾನೂನು ಪಾಲನೆ ಮುಂತಾದ ಸೇವೆಯನ್ನು ವಿಶ್ವನಾಥ್ ನೀಡಿದ್ದಾರೆ. ಆದ್ದರಿಂದ ಅವರ ಗೆಲವು ಖಚಿತ ಎಂದು ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement