ಮಾರುತಿ ಪ್ರೌಢಶಾಲೆಗೆ ಐಟಿಸಿ ಸಹಾಯಧನ
ಹುಣಸೂರು: ತಾಲೂಕಿನ ತಟ್ಟೆಕೆರೆ ಶ್ರೀ ಮಾರುತಿ ಪ್ರೌಢಶಾಲೆಯ ಅಭಿವೃದ್ಧಿಗಾಗಿ 2.50 ಲಕ್ಷದ ಚೆಕ್ ಅನ್ನು ಐಎಲ್ಟಿಡಿ ಕಂಪನಿ ವ್ಯವಸ್ಥಾಪಕ ರಾಜಶೇಖರ್ ಅವರು ಸಂಸ್ಥೆಯ ಅಧ್ಯಕ್ಷ ಎಂ.ಆರ್. ನಾಗರಾಜಶ್ರೇಷ್ಠಿ ಅವರಿಗೆ ವಿತರಿಸಿದರು. ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, ಐಟಿಸಿ ಕಂಪನಿಯ ವ್ಯವಸ್ಥಾಪಕ ರಾಜಶೇಖರ್ ಈ ಶಾಲೆಯ ಕಾಂಪೌಂಡ್, ಶಾಲಾ ಕೊಠಡಿ ನಿರ್ಮಾಣ- ಕುಡಿಯುವ ನೀರಿನ ಯೋಜನೆಗೆ 10 ಲಕ್ಷ ನೆರವು ನೀಡಿದ್ದಾರೆ. ಪಟ್ಟಣದ ಮಹಿಳಾ ಪಿಯು ಕಾಲೇಜಿನಲ್ಲಿ ರು. 2 ಲಕ್ಷ ವಿನಿಯೋಗಿಸಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ತಂಬಾಕು ಬೆಳೆಯುವ ಪ್ರದೇಶ ವ್ಯಾಪ್ತಿಯ ಪಿರಿಯಾಪಟ್ಟಣ, ಎಚ್.ಡಿ. ಕೋಟೆ ತಾಲೂಕುಗಳ ಶಾಲೆಗಳಿಗೆ ಪಿಠೋಪಕರಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಎಂ.ಆರ್.ನಾಗರಾಜ ಶ್ರೇಷ್ಠಿ ಮಾತನಾಡಿ, ಐಟಿಸಿ ಕಂಪನಿಯ ಸೇವಾ ಕೈಂಕರ್ಯಗಳನ್ನು ಪ್ರಶಂಸಿಸಿ, ಐಟಿಸಿ ವ್ಯವಸ್ಥಾಪಕ ರಾಜಶೇಖರ್ ಅವರನ್ನು ಅಭಿನಂದಿಸಿದರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಬಿ.ರಾಮಚಂದ್ರ, ಕೋಶಾಧಿಕಾರಿ ಎನ್.ಸುರೇಶ್, ನಿರ್ದೇಶಕ ನಾಗೇಗೌಡ ಇದ್ದರು.