ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಶಕ್ಕೆ ಖ್ಯಾತಿ ತಂದುಕೊಟ್ಟ ಬುದ್ಧ

Rashmi Kasaragodu
Updated On : 15 May 2014, 12:51 pm

ಕ.ಪ್ರ.ವಾರ್ತೆ    ಟಿ.ನರಸೀಪುರ    ಮೇ 14
ಭಾರತದ ಭವ್ಯ ನೆಲೆಯಲ್ಲಿ ಉಗಮಗೊಂಡ ಬೌದ್ಧ ಧರ್ಮ, ಗೌತಮ ಬುದ್ಧರ ಪ್ರಭಾವದಿಂದಾಗಿ ವಿದೇಶಗಳಲ್ಲಿ ವಿಖ್ಯಾತಿ ಪಡೆದು ನೆಲೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಹೇಳಿದರು.
ಪಟ್ಟಣದ ತ್ರಿವೇಣಿ ನಗರದ ನಳಂದ ಬುದ್ಧ ವಿಹಾರದಲ್ಲಿ ಗುರುವಾರ ನಡೆದ 2,558ನೇ ಬುದ್ಧ ಪೂರ್ಣಿಮ ಮಹೋತ್ಸವ ಹಾಗೂ ಬುದ್ಧ ಧಮ್ಮ ಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿನ ಜನರಿಗೂ ಹಾಗೂ ಬೌದ್ಧಧರ್ಮಕ್ಕೂ ಅಭಿನಾಭಾವ ಸಂಬಂಧವಿದೆ. ದೇಶದ ಮೂಲ ಧರ್ಮವಾದ ಬೌದ್ಧ ಧರ್ಮ ಇತ್ತೀಚೆಗಂತೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಸಂಯೋಜಕ ಎನ್.ಮಹೇಶ್ ಬುದ್ಧದಮ್ಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದಮ್ಮ ಎಂದರೆ ಸತ್ಯದ ಮಾರ್ಗದಲ್ಲಿ ನಡೆಯುವುದು. ಗೌತಮ ಬುದ್ಧರು ತಾನು ಕಂಡ ಸತ್ಯವನ್ನು ಜನರಿಗೆ ತಿಳಿಸುವ ಮೂಲಕ ಬೌದ್ಧದಮ್ಮವನ್ನು ಪಾಲನೆ ಮಾಡಿದರು. ಇಡೀ ಜಗತ್ತಿಗೆ ಬೌದ್ಧದಮ್ಮವನ್ನು ಸಾರಿದ ದೇಶ ಭಾರತ. ಜೀವನದ ಸಾರವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿರುವುದರಿಂದ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.
ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘ, ತ್ರಿವೇಣಿ ನಗರ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಳಂದ ಬುದ್ಧ ವಿಹಾರದ ಸಂಯುಕ್ತಾಶ್ರಯದಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ಆಯೋಜಿಸಿದ್ದ ಬುದ್ಧ ಧಮ್ಮ ಜಾಗೃತಿ ಯಾತ್ರೆ ತಾಲೂಕಿನಾದ್ಯಂತ ಹತ್ತಾರು ದಿನಗಳ ಕಾಲ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಬುದ್ಧ ಪೂರ್ಣಿಮೆಯ ಬುಧವಾರ ಸಮಾರೋಪ ಸಮಾರಂಭದ ಮೂಲಕ ಯಾತ್ರೆ ಅಂತಿಮಗೊಂಡಿತು.
ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ, ಬಿಜೆಪಿ ಮುಖಂಡ ಪುಟ್ಟಬಸವಯ್ಯ, ಗುತ್ತಿಗೆದಾರ ಹೊಸಪುರ ಕೆ.ಮಲ್ಲು, ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ಜೆಡಿಎಸ್ ಮುಖಂಡ ಎಂ.ಕೆ. ಸಿದ್ದರಾಜು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement