ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಂಕ್ರಾಮಿಕ ರೋಗಗಳ ಜಾಗೃತಿ

Rashmi Kasaragodu
Updated On : 15 May 2014, 12:50 pm

ಕ.ಪ್ರ.ವಾರ್ತೆ    ಕೆ.ಆರ್. ನಗರ    ಮೇ 14
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಎಚ್ಚರ ತಪ್ಪಿದರೆ ಮಾರಣಾಂತಿಕ ಕಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ ಎಂಬ ಘೋಷ ವಾಕ್ಯಗಳೊಂದಿಗೆ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಜಾಗೃತಿ ಮೂಡಿಸಿದರು.
ಬೇಸಿಗೆ ಸಮಯವಾಗಿರುವುದರಿಂದ ಆಸ್ಪತ್ರೆ ವ್ಯಾಪ್ತಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಗ್ರಾಮದಲ್ಲಿನ ಮನೆಮನೆಗೆ ತೆರಳಿ, ನೀರಿನಿಂದ ಹರಡಬಹುದಾದ ಡೆಂಘೀ, ಚಿಕೂನ್‌ಗುನ್ಯ, ಮಲೇರಿಯಾ, ಸಿತಾಳೆ, ಜಾಂಡಿಸ್, ಕರುಳುಬೇನೆ, ದಡಾರ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
ಆಶಾ ಕಾರ್ಯಕರ್ತೆಯರಾದ ರೂಪಾ, ಶೋಭಾ, ಸರೋಜಾ ಗ್ರಾಮದ ಮುಖಂಡರಾದ ರವಿ, ಗಂಗಾಧರ, ಸಿದ್ದಯ್ಯ ಇದ್ದರು.
ಸೌಭಾಗ್ಯ, ರೇಣುಕಾ, ಚನ್ನಜಮ್ಮ, ಸುಜಾತ, ಲತಾ, ಸುಮತಿ ಅವರು ಹೊಸೂರು, ಹಳಿಯೂರು ಬಡಾವಣೆ, ಸಾಲೆಕೊಪ್ಪಲು, ದಿಡ್ಡಹಳ್ಳಿ, ಜವರೇಗೌಡನಕೊಪ್ಪಲು ಗ್ರಾಮಗಳಲ್ಲಿ ತೆರಳಿ ಜಾಗೃತಿ ಅಭಿಯಾನ ಕೈಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement