ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಸವಣ್ಣನವರ ವಚನಗಳು ಸಾರ್ವಕಾಲಿಕ

Rashmi Kasaragodu
Updated On : 16 May 2014, 1:24 am

ಕೆ.ಆರ್. ನಗರ: ಸಮಾಜದ ಸರ್ವರ ಉದ್ಧಾರಕ್ಕೆ ದುಡಿದು ಜಾತಿಯ ಮೂಲೋತ್ಪಾಟನೆಯನ್ನು ನಾಶ ಮಾಡಿ, ಮಾನವೀಯತೆ ಮತ್ತು ಕಾಯಕ ಜೀವಿಗಳಿಗೆ ಆದ್ಯತೆ ನೀಡಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ ಎಂದು ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಬಸವ ಬಳಗದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಮತ್ತು ಕಾಲಕ್ಕೆ ಮಹತ್ವ ನೀಡಿದ ಜಗಜ್ಯೋತಿ ಬಸವೇಶ್ವರರು ಭೇದ ಬಾವ ಮಾಡದೆ ಸರ್ವರನ್ನು ಸಮನಾಗಿ ಕಂಡ ಮಹಾಪುರುಷರು ಎಂದು ತಿಳಿಸಿದರು. ಗ್ರಾಮಾಂತರ ವಿಭಾಗದ ಹಿರಿಯ ನಿಯಂತ್ರಣಾಧಿಕಾರಿಗಳಾದ ಬಿ.ವಿ.ಶ್ರೀನಿವಾಸ್, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್, ಕಾಂಗ್ರೆಸ್ ಮುಖಂಡ ಸಿ.ಪಿ. ರಮೇಶ್ ಮಾತನಾಡಿದರು. ಬಳಗದ ಗೌರವಾಧ್ಯಕ್ಷ ಎನ್.ಸೋಮಶೇಖರ್, ಅಧ್ಯಕ್ಷ ಕೆ.ಎಚ್.ಸ್ವಾಮಿ, ಉಪಾಧ್ಯಕ್ಷರು ಬಿ.ಎ. ಮಹದೇವ, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಪರಮೇಶ್, ಕಾರ್ಯದರ್ಶಿ ಚೆನ್ನಬಸಪ್ಪ, ಸಹ ಕಾರ್ಯದರ್ಶಿ ಟಿ.ಸಿ. ಚಂದ್ರಶೇಖರಯ್ಯ ತೇಜೂರು, ಮಾಜಿ ಅಧ್ಯಕ್ಷ ಪಿ.ಎ.ಪುಟ್ಟರಾಜು, ನಿರ್ದೇಶಕ ಬಿ.ವಿ. ಪ್ರಭಾಕರ, ಎನ್. ಸೋಮಣ್ಣ, ಅಣ್ಣಾಜಪ್ಪ, ಬಿ.ಹರೀಶ್, ಶಿವಪ್ರಕಾಶ್, ಬಿ.ರವಿಕುಮಾರ್, ಪಿ.ಸುರೇಶ್, ಬಸವರಾಜಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement