ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಸ್ವೀಕಾರ
ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಗುರುವಾರ ಆರಂಭಿಸಿರುವ ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿಯನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ ಸ್ವೀಕರಿಸಿದರು.
ಬೆಳಗ್ಗೆ ಬೆಂಗಳೂರಿನಿಂದ ಹೊರಟ ಯಾತ್ರೆಯು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮೂಲಕ ಮೈಸೂರಿಗೆ ಆಗಮಿಸಿತು. ನಗರ ಕಾಂಗ್ರೆಸ್ ಕಚೇರಿ ಬಳಿಗೆ ಜ್ಯೋತಿ ಇದ್ದ ವಾಹನ ಆಗಮಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಶಾಸಕ ಎಂ.ಕೆ. ಸೋಮಶೇಖರ್ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ ನೇತೃತ್ವದಲ್ಲಿ ಜ್ಯೋತಿ ಸ್ವೀಕರಿಸಿ, ಕಾಂಗ್ರೆಸ್ ಪರ ಘೋಷಣೆ ಕೂಗಿದರು. ಬಳಿಕ ನಗರದ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಕೆ.ಆರ್. ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆಯ ಮೂಲಕ ನಂಜನಗೂಡಿಗೆ ತೆರಳಿತು.
ಯಾತ್ರೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರು, ದೇಶದಲ್ಲಿ ಭಯೋತ್ಪಾದನೆ ತೊಲಗಬೇಕು ಎಂಬ ಉದ್ದೇಶದಿಂದ ಈ ಸದ್ಭಾವನಾ ಯಾತ್ರೆ ಆರಂಭಿಸಲಾಗಿದೆ. ಈ ಜ್ಯೋತಿಯು ಚಾಮರಾಜನಗರದಲ್ಲಿ ಗುರುವಾರ ರಾತ್ರಿ ತಂಗಿದ್ದು, ಗುರುವಾರ ಸತ್ಯಮಂಗಲ, ಕೊಚ್ಚಿನ್, ಕನ್ಯಾಕುಮಾರಿ, ತಿರುವನಂತಪುರಂ, ಮಧುರೈ, ಪಾಂಡಿಚೇರಿ ಮೂಲಕ ಚೆನ್ನೈಗೆ ತೆರಳಿ ಅಂತ್ಯಗೊಳ್ಳಲಿದೆ ಎಂದು ಜ್ಯೋತಿಯ ಆಗಮನದ ಉದ್ದೇಶವನ್ನು ತಿಳಿಸಿದರು.
ನಗರ ಕಾಂಗ್ರೆಸ್‌ನ ಸೇವಾದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.