ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

24 ವರ್ಷದ ದಾಖಲೆ ಅಳಿಸಿದ ಪ್ರತಾಪ್

Rashmi Kasaragodu
Updated On : 16 May 2014, 11:43 am

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಿಂದ ಅಂಕಣಕಾರ ಪ್ರತಾಪ್ ಸಿಂಹ ಗೆಲ್ಲುವ ಮೂಲಕ ದಾಖಲೆಗೆ ಕಾರಣಕರ್ತರಾಗಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರ 1952ರ ಮೊದಲ ಮಹಾ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ದ್ವಿಸದಸ್ಯ ಕ್ಷೇತ್ರವಾಗಿದ್ದಾಗ 1952 ರಲ್ಲಿ ವೀರಶೈವ ಜನಾಂಗದ ಎಂ.ಎಸ್. ಗುರುಪಾದಸ್ವಾಮಿ, ಪ.ಜಾತಿಯ ಎನ್. ರಾಚಯ್ಯ, 1957 ರಲ್ಲಿ ದೇವಾಂಗ ಜನಾಂಗದ ಎಂ.ಶಂಕರಯ್ಯ ಮತ್ತು ಪ.ಜಾತಿಯ ಎಸ್.ಎಂ. ಸಿದ್ದಯ್ಯ, ಏಕಸದಸ್ಯ ಕ್ಷೇತ್ರವಾದ ನಂತರ 1962 ರಲ್ಲಿ ದೇವಾಂಗ ಜನಾಂಗದ ಎಂ.ಶಂಕರಯ್ಯ, 1967, 1971 ಹಾಗೂ 1977 ರಲ್ಲಿ ಒಕ್ಕಲಿಗ ಜನಾಂಗದ ಎಚ್.ಡಿ. ತುಳಸೀದಾಸ್ ಗೆದ್ದಿದ್ದರು. 1980 ರಲ್ಲಿ ವೀರಶೈವ ಜನಾಂಗದ ಎಂ.ರಾಜಶೇಖರಮೂರ್ತಿ, 1984, 1989, 1996, 1999 ರಲ್ಲಿ ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1991 ರಲ್ಲಿ ಅರಸು ಜನಾಂಗದ ಚಂದ್ರಪ್ರಭಾ ಅರಸು, 1998, 2004 ರಲ್ಲಿ ಕುರುಬ ಜನಾಂಗದ ಸಿ.ಎಚ್.ವಿಜಯಶಂಕರ್, 2009ರಲ್ಲಿ ಕುರುಬ ಜನಾಂಗದ ಎಚ್. ವಿಶ್ವನಾಥ್ ಗೆದ್ದಿದ್ದರು. ತುಳಸೀದಾಸ್ ಅವರ ನಂತರ ಒಕ್ಕಲಿಗ ಜನಾಂಗದವರು ಈ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. ಈಗ ಪ್ರತಾಪ್ ಸಿಂಹ ಗೆದ್ದಿದ್ದಾರೆ.
ಎರಡನೇ ಪತ್ರಕರ್ತ: ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎರಡನೇ ಪತ್ರಕರ್ತ ಪ್ರತಾಪ್ ಸಿಂಹ. 1952 ರಲ್ಲಿ ಪ್ರಜಾಮತ ಸಂಪಾದಕರಾಗಿದ್ದ ಎಂ.ಎಸ್. ಗುರುಪಾದಸ್ವಾಮಿ ಅವರು ಅಂದಿನ ಕಾಂಗ್ರೆಸ್ ಘಟಾನುಘಟಿ ನಾಯಕ ಎಚ್.ಸಿ.ದಾಸಪ್ಪ ಅವರನ್ನು ಸೋಲಿಸಿದ್ದರೆ ಈಗ ಪ್ರತಾಪ್ ಸಿಂಹ ರಾಜಕೀಯ ಪ್ರವೇಶಿಸಿದ ಒಂದೇ ತಿಂಗಳಲ್ಲಿ ಮಾಜಿ ಸಚಿವ, ಹಾಲಿ ಸಂಸದ ಎಚ್. ವಿಶ್ವನಾಥ್ ಅವರನ್ನು ಸೋಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement