ಅಂತ್ಯದವರೆಗೂ ಸಿಂಹಗೆ ಮುನ್ನಡೆ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಮೇ 16
ಮೈಸೂರು- ಕೊಡಗು ಲೋಕಸಭಾ ಚುನಾವಣಾ ಮತ ಎಣಿಕೆಯ ಆರಂಭದಿಂದಲೂ ಅಂತ್ಯವರೆಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಮುನ್ನಡೆ ಸಾಧಿಸುವ ಮೂಲಕ ವಿಜಯಲಕ್ಷ್ಮಿಯನ್ನು ತಮ್ಮದಾಗಿಸಿಕೊಂಡು ಘರ್ಜಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾದ ಹಾಲಿ ಸಂಸದ ಎಚ್. ವಿಶ್ವನಾಥ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳುವ ಮೂಲಕ ಪ್ರತಾಪ್ ಪ್ರಥಮರಾಗಿ ಉಳಿದರು.
ಸುತ್ತುಗಳ ಸರಣಿ: ಮೈಸೂರು- ಕೊಡಗು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಒಟ್ಟಾರೆ 23 ಸುತ್ತುಗಳಲ್ಲಿ ನಡೆಯಿತು. ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು 22,207 ಮತ ಪಡೆದರು. ಕಾಂಗ್ರೆಸ್‌ನ ವಿಶ್ವನಾಥ್ ಅವರು 22,179 ಮತ ಪಡೆದು ಕೇವಲ 28 ಮತಗಳಿಂದ ಹಿನ್ನಡೆ ಉಂಟಾಯಿತು.
ಎರಡನೇ ಸುತ್ತಿನಲ್ಲಿ 584 ಮತಗಳ ಅಂತರದಿಂದ ಪ್ರತಾಪ್ ಮುನ್ನಡೆ ಸಾಧಿಸಿದರು. ಈ ಅಂತರವು ಪ್ರತಿ ಸುತ್ತಿನಲ್ಲೂ ಹೆಚ್ಚುತ್ತಲೇ ಹೋಯಿತು. ಕೆಲವು ಸುತ್ತುಗಳಲ್ಲೂ ವಿಶ್ವನಾಥ್ ಅವರು ಹೆಚ್ಚಿನ ಮತಗಳ ಪಡೆದಿದ್ದರಿಂದ ಪ್ರತಾಪ್ ಸಿಂಹ ಅವರ ಅಂತರದಲ್ಲಿ ಮಾತ್ರ ವ್ಯತ್ಯಾಸ ಏರುಪೇರಾಯಿತು. ಹೀಗಿದ್ದರೂ ಪ್ರತಿ ಸುತ್ತಿನಲ್ಲಿ ಪ್ರತಾಪ್ ಮುನ್ನಡೆ ಸಾಧಿಸುವ ಮೂಲಕ ಹಾಲಿ ಸಂಸದರಿಗೆ ಮುಖಭಂಗ ಮಾಡಿದರು.
ಅಂಚೆಯಲ್ಲೂ ಪ್ರಥಮ: ಇನ್ನು 2,282 ಅಂಚೆ ಮತದಾನದಲ್ಲಿ 1,365 ಮತಗಳನ್ನು ಪ್ರತಾಪ್ ಸಿಂಹ ಪಡೆದರೆ, 665 ಮತಗಳು ಮಾತ್ರ ವಿಶ್ವನಾಥ್ ಅವರಿಗೆ ಧಕ್ಕಿತ್ತು. ಅಂಚೆ ಮತದಾನದಲ್ಲೂ 700 ಮತಗಳ ಅಂತರವನ್ನು ಪ್ರತಾಪ್ ಸಿಂಹ ಕಾಯ್ದುಕೊಂಡಿದ್ದರು.
ಪ್ರತಾಪ್ ಸುತ್ತಿದ್ದೂ ಹೀಗೆ...
ಸುತ್ತು ಪ್ರತಾಪ್ ಸಿಂಹ ವಿಶ್ವನಾಥ್ ಅಂತರ
1. 22,207 22,179 28
2. 46,045 45,463 584
3. 73,072 66,253 6,821
4. 1,02,607 88,036 14,571
5. 1,27,350 1,12,625 14,725
6. 1,50,784 1,35,921 14,827
7. 1,75,583 1,58,467 17,116
8. 1,98,163 1,83,524 14,639
9. 2,20,580 2,10,737 9,772
10. 2,48,108 2,32,333 15,775
11. 2,75,313 2,53,089 22,224
12. 2,98,981 2,78,814 20,167
13. 3,22,489 3,03,081 19,408
14. 3,49,529 3,28,043 21,486
15. 3,73,825 3,52,388 21,437
16. 3,99,764 3,75,802 23,962
17. 4,27,086 3,98,442 28,644
18. 4,53,663 4,19,125 34,538
19. 4,68,273 4,35,947 32,326
20. 4,80,186 4,46,974 33,212
21. 4,91,514 4,60,523 30,991
22. 5,02,350 4,71,561 30,789
23. 5,02,543 4,71,635 30,908
ಅಂಚೆ ಮತ
ಪ್ರತಾಪ್ ಸಿಂಹ 1,365
ವಿಶ್ವನಾಥ್ 665
ಅಂತರ 700
ಒಟ್ಟು ಅಂಚೆಮತಗಳು
ಪ್ರತಾಪ್ ಸಿಂಹ - 5,03,908
ವಿಶ್ವನಾಥ್ - 4,72,300
ಅಂತರ 31,608