ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

1989 ರಿಂದಲೂ ಸತತ 2ನೇ ಗೆಲವು ಯಾರಿಗೂ ಸಿಕ್ಕಿಲ್ಲ

Rashmi Kasaragodu
Updated On : 18 May 2014, 12:19 pm

 ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ    ಮೈಸೂರು    ಮೇ 17
ಅವಿಭಜಿತ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ವಿಚಿತ್ರ ದಾಖಲೆ ಇದೆ. ಮೈಸೂರಿನಿಂದಲೂ 1989 ರಿಂದಲೂ ಸತತ ಎರಡನೇ ಬಾರಿಗೆ ಯಾರೂ ಗೆದ್ದಿಲ್ಲ. ಚಾಮರಾಜನಗರದಲ್ಲೂ 1998 ರಿಂದ ಇದೇ ಸ್ಥಿತಿ ಇತ್ತು. ಇದೀಗ ಧ್ರುವನಾರಾಯಣ ಸತತ ಎರಡನೇ ಗೆಲವು ದಾಖಲಿಸಿದ್ದಾರೆ.
ಮೈಸೂರು ಕ್ಷೇತ್ರದಲ್ಲಿ ಎಂ.ಶಂಕರಯ್ಯ, ಎಚ್.ಡಿ. ತುಳಸೀದಾಸ್ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮಾತ್ರ ಸತತ ಎರಡು ಜಯ ದಾಖಲಿಸಿದವರು. ತುಳಸೀದಾಸ್ ಅವರು ಮಾತ್ರ ಹ್ಯಾಟ್ರಿಕ್ ಜಯ ದಾಖಲಿಸಿದವರು.
1952 ರಲ್ಲಿ ಕೆಎಂಪಿಪಿಯ ಎಂ.ಎಸ್. ಗುರುಪಾದಸ್ವಾಮಿ, ಕಾಂಗ್ರೆಸ್‌ನ ಎನ್.ರಾಚಯ್ಯ, 1957 ರಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ, ಎಸ್.ಎಂ. ಸಿದ್ದಯ್ಯ, 1962 ರಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ, 1962, 1971 ಮತ್ತು 1977 ರಲ್ಲಿ ಕಾಂಗ್ರೆಸ್‌ನ ಎಚ್.ಡಿ.ತುಳಸೀದಾಸ್ ಆಯ್ಕೆಯಾಗಿದ್ದರು.
1980 ರಲ್ಲಿ ಇಂದಿರಾ ಕಾಂಗ್ರೆಸ್‌ನ ಎಂ.ರಾಜಶೇಖರಮೂರ್ತಿ, 1984, 1989- ಹೀಗೆ ಸತತ ಎರಡು ಗೆಲವು ದಾಖಲಿಸಿದ್ದವರು ಶ್ರೀಕಂಠದತ್ತ ನರಿಸಿಂಹರಾಜ ಒಡೆಯರ್. ಒಡೆಯರ್ 1991 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು. ಆ ಬಾರಿ ಗೆದ್ದವರು ಕಾಂಗ್ರೆಸ್‌ನ ಚಂದ್ರಪ್ರಭಾ ಅರಸು. 1996 ರಲ್ಲಿ ಮೂರನೇ ಬಾರಿಗೆ ಗೆದ್ದ ಒಡೆಯರ್ 1998 ರಲ್ಲಿ ಅನಾರೋಗ್ಯ ನಿಮಿತ್ತ ಸ್ಪರ್ಧಿಸಿರಲಿಲ್ಲ. ಆ ಬಾರಿ ಗೆದ್ದವರು ಬಿಜೆಪಿಯ ಸಿ.ಎಚ್. ವಿಜಯಶಂಕರ್. 1999 ರಲ್ಲಿ ಒಡೆಯರ್ ನಾಲ್ಕನೇ ಬಾರಿಗೆ ಆಯ್ಕೆಯಾದರು. ವಿಜಯಶಂಕರ್ ಸೋತರು.
2004 ರಲ್ಲಿ ವಿಜಯಶಂಕರ್ ಎರಡನೇ ಬಾರಿಗೆ ಗೆದ್ದರು. ಒಡೆಯರ್ ಸೋತರು. 2009 ರಲ್ಲಿ ಎಚ್. ವಿಶ್ವನಾಥ್ ಗೆದ್ದಿದ್ದರು. ವಿಜಯಶಂಕರ್ ಸೋತಿದ್ದರು. ಈ ಬಾರಿ ಪ್ರತಾಪ್ ಸಿಂಹ ಗೆದ್ದಿದ್ದಾರೆ. ವಿಶ್ವನಾಥ್ ಸೋತಿದ್ದಾರೆ.
ಚಾಮರಾಜನಗರದಲ್ಲಿ 1962, 1967, 1971 ರಲ್ಲಿ ಎಸ್.ಎಂ.ಸಿದ್ದಯ್ಯ ಹ್ಯಾಟ್ರಿಕ್ ಗೆಲವು ದಾಖಲಿಸಿದ್ದರು. ಇದಕ್ಕೂ ಮುನ್ನ ಅವರು 1957 ರಲ್ಲಿ ಮೈಸೂರಿನಿಂದಲೂ ಆಯ್ಕೆಯಾಗಿದ್ದರು. ಚಾಮರಾಜನಗರದಿಂದ 1977 ರಲ್ಲಿ ಕಾಂಗ್ರೆಸ್‌ನ ಬಿ.ರಾಚಯ್ಯ, 1980, 1984, 1989, 1991- ಹೀಗೆ ಸತತ ನಾಲ್ಕು ಬಾರಿ ಆಯ್ಕೆಯಾದವರು ವಿ.ಶ್ರೀನಿವಾಸಪ್ರಸಾದ್. ಅವರು 1996, 1998 ರಲ್ಲಿ ಸೋತರು. ಆ ಎರಡು ಬಾರಿಯೂ ಗೆದ್ದವರು ಜನತಾದಳದ ಎ.ಸಿದ್ದರಾಜು.1999 ರಲ್ಲಿ ಮತ್ತೆ ಶ್ರೀನಿವಾಸಪ್ರಸಾದ್ ಐದನೇ ಬಾರಿ ಗೆದ್ದರು. ಸಿದ್ದರಾಜು ಸೋತು ಹ್ಯಾಟ್ರಿಕ್ ತಪ್ಪಿಸಿಕೊಂಡರು. 2004 ರಲ್ಲಿ ಜೆಡಿಎಸ್‌ನ ಕಾಗಲವಾಡಿ ಶಿವಣ್ಣ ಗೆದ್ದಿದ್ದರು. ಸಿದ್ದರಾಜು ಸೋತಿದ್ದರು. 2009 ರಲ್ಲಿ ಈ ಇಬ್ಬರಿಗೂ ಟೆಕೆಟ್ ಸಿಗಲಿಲ್ಲ. ಆರ್. ಧ್ರುವನಾರಾಯಣ ಗೆದ್ದಿದ್ದರು. ಈ ಬಾರಿ ಧ್ರುವನಾರಾಯಣ ಸತತ ಎರಡನೇ ಬಾರಿಗೆ ಗೆದ್ದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement