ಮಂಚೇಗೌಡನಕೊಪ್ಪಲು ಶಾಲೆಗೆ ಉತ್ತಮ ಫಲಿತಾಂಶ
ಮೈಸೂರು: ಮಂಚೇಗೌಡನಕೊಪ್ಪಲು ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.88 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಒಟ್ಟು 108 ವಿದ್ಯಾರ್ಥಿಗಳಲ್ಲಿ ಮೂವರು ಉನ್ನತ ಶ್ರೇಣಿ, 32 ಪ್ರಥಮ, 28 ದ್ವಿತೀಯ ಹಾಗೂ 43 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಜಿ. ಭಾರ್ಗವ ಲಕ್ಷ್ಮೀ 584, ಅಪೂರ್ವ 564, ಜೆ. ಪೂಜಾ 532, ಎಸ್. ಹೇಮಲತಾ 514, ಅಕ್ಷಯಕುಮಾರ್ 507, ಶಶಿಕಲಾ 501 ಅಂಕ ಗಳಿಸಿದ್ದಾರೆ.