ಮೇಘನಾಗೆ ಶೇ. 95.2 ಅಂಕ
ಮೈಸೂರು: ನಗರದ ಐಡಿಯಲ್ ಜಾವಾ ರೋಟರಿ ಶಾಲೆಯ ವಿದ್ಯಾರ್ಥಿನಿ ಎಸ್.ಮೇಘನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 595 ಅಂಕ ಗಳಿಸಿದ್ದಾರೆ. ಇವರು ಕನ್ನಡದಲ್ಲಿ 119 ಅಂಕ ಗಳಿಸಿದ್ದಾರೆ.
ಅಭಿರಾಮ್ಗೆ ಶೇ. 97.76 ಅಂಕ
ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಅಭಿರಾಮ್ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97.76 ಅಂಕ ಬಂದಿದ್ದು, ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ.
ಶಿವಾನಂದ ವಿದ್ಯಾಸಂಸ್ಥೆ
ಹೆಬ್ಬಾಳಿನಲ್ಲಿರುವ ಶಿವಾನಂದ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 34 ವಿದ್ಯಾರ್ಥಿಗಳಲ್ಲಿ 6 ಮಂದಿ ಉತ್ತಮ ಶ್ರೇಣಿ, 16 ಮಂದಿ ಪ್ರಥಮ, 11 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಜಿ.ಎಸ್. ರಾಧಿಕಾ 568, ಜಿ.ವಿ. ಸೋನಿಕಾ 559, ಆರ್. ಮಧುಶ್ರೀ 552, ಎ. ಪವನ್ಗೌಡ 550, ಆರ್. ಅರ್ಪಿತಾ 535 ಅಂಕ ಗಳಿಸಿದ್ದಾರೆ.
ಹೆರಿಗೆ ಆಸ್ಪತ್ರೆ ಆರಂಭಕ್ಕೆ ಸಚಿವ ಖಾದರ್ಗೆ ಮನವಿ
ಮೈಸೂರು: ಸರ್ಕಾರದ ವತಿಯಿಂದ ರಾಜೇಂದ್ರನಗರ, ಕೆಸರೆ, ಬೆಲವತ್ತ ಗ್ರಾಮಗಳಲ್ಲಿ ಒಂದು ಹೆರಿಗೆ ಆಸ್ಪತ್ರೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಅಲ್ಪಸಂಖ್ಯಾತರ ಮುಖಂಡರು ಮನವಿ ಮಾಡಿದರು. ಈ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ಹಾಗೂ ಬಡವರ್ಗದ ನಾಗರಿಕರು ವಾಸಿಸುತ್ತಿದ್ದು, ಇಲ್ಲಿನ ಯಾವುದೇ ಮೆಟರ್ನಿಟಿ ಹೋಂ ಇಲ್ಲದೆ ಗರ್ಭಿಣಿಯರಿಗೆ ತಪಾಸಣೆಗಾಗಿ, ಹೆರಿಗೆಗಾಗಿ ಕೆ.ಆರ್. ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದ್ದು, ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರದ ವತಿಯಿಂದ ಕೂಡಲೆ ಒಂದು ಮೆಟರ್ನಿಟಿ ಹೋಂ ತೆರೆಯುವಂತೆ ಡಿಸಿಸಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಅಲ್ಲಾ ಭಕ್ಷ್, ಮೊಹಮ್ಮದ್ ರಫಿ, ಪ್ಯಾರಿಜಾನ್ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.