ಹೂತಿಟ್ಟ ಶವ: ಮರು ಪರೀಕ್ಷೆ
ಮೈಸೂರು: ಕಳೆದ ಏಪ್ರಿಲ್‌ನಲ್ಲಿ ಮೃತಪಟ್ಟ ವ್ಯಕ್ತಿ ಕೊಲೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಮ್ಮನಹಳ್ಳಿಯಲ್ಲಿ ಸ್ಮಶಾನದಲ್ಲಿದ್ದ ಶವವನ್ನು ಶನಿವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಮೈಸೂರು ತಾಲೂಕು ರಮ್ಮನಹಳ್ಳಿ ನಿವಾಸಿ ಮಹದೇವ (30) ಎಂಬವರೆ ಕೊಲೆಯಾದವರು. ಲೋಕಸಭಾ ಚುನಾವಣಾ ಮತದಾನದಂದು (ಏ.17) ರಮ್ಮನಹಳ್ಳಿಯ ಶಿವಣ್ಣ ಎಂಬವರು ಮಹದೇವನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಅಸ್ವಸ್ಥನಾಗಿದ್ದ ಮಹದೇವ ಏ.20 ರಂದು ಮೃತಪಟ್ಟಿದ್ದರು. ಮಹದೇವ ಕುಟುಂಬದವರು ನೀಡಿದ ದೂರಿನನ್ವಯ ಮೈಸೂರು ದಕ್ಷಿಣ ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಹೆಚ್ಚುವರಿ ಎಸ್ಪಿ ಡಾ.ಎ.ರಾಜಾ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ರಾಹುಲ್‌ಕುಮಾರ್, ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಮತ್ತು ಸಿಬ್ಬಂದಿ, ವೈದ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.