ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಈಶಾನ್ಯ ರಾಜ್ಯ ಕರಕುಶಲ ಆರಂಭ

Vishwanath S
Updated On : 19 May 2014, 12:47 pm

ಕ.ಪ್ರ.ವಾರ್ತೆ ,  ಮೈಸೂರು ,  ಮೇ 18
ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯವು ಅಂತಾರಾಷ್ಟ್ರೀಯ ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ಮತ್ತು ಜಾನಪದ ಕಲಾವಿದರ ವಸ್ತುಪ್ರದರ್ಶನ ಕಾರ್ಯಾಗಾರ ಆಯೋಜಿಸಿದೆ.
ಮೇ 18 ರಿಂದ 22 ರವರೆಗೆ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ನಾಗಲ್ಯಾಂಡ್ ರಾಜ್ಯದ ಕಲಾವಿದರು ಭಾಗವಹಿಸಿದ್ದಾರೆ. ಈ ಪ್ರದರ್ಶನದಲ್ಲಿ 14 ಮಳಿಗೆಗಳಿದ್ದು, ಮಣಿಪುರದ ಕಲಾವಿದರು ಈಚಲು ಮರದಿಂದ ಬುಟ್ಟಿ ತಯಾರಿಕೆ, ಅಸ್ಸಾಂ ಕಲಾವಿದರು ಜೊಂಡಿನಿಂದ ಬ್ಯಾಗ್, ಮಣಿಪುರ ಕಲಾವಿದರು ಮಣ್ಣಿನಿಂದ ಅಲಂಕಾರಿಕ ವಸ್ತುಗಳು, ತ್ರಿಪುರ ಕಲಾವಿದರು ಬಿದಿರಿನಿಂದ ಪೀಠೋಪಕರಣ, ಮೇಘಾಲಯದ ನೇಕಾರರು, ನಾಗಾಲ್ಯಾಂಡ್ ಕಲಾವಿದರು ಅಲಂಕಾರಿಕ ಆಯುಧಗಳ ತಯಾರಿಕೆ, ಬಿಹಾರ ಕಲಾವಿದರು ಸ್ಥಳೀಯ ಮಣ್ಣಿನಿಂದ ವಿಗ್ರಹ ತಯಾರಿಕೆ ಮಾಡಿದ್ದಾರೆ.
ಇದೆ ವೇಳೆ ಆಯೋಜಿಸಿದ್ದ ಚಿತ್ರಕಲಾ ಶಿಬಿರದಲ್ಲಿ ಸುಮಾರು 10 ಶಾಲೆಯ 38 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಶಿಬಿರಕ್ಕೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರು ಮಠ್ ಚಾಲನೆ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ಬಿಹಾರ ಕಲಾವಿದ ಲಾಲಾ ಪಂಡಿತ್ ಅವರು ಟೆರಾಕೋಟ ಮಣ್ಣಿನ ಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಜೊತೆ ಅವರ ಇಡಿ ಕುಟುಂಬ ಈ ಕಲೆಯಲ್ಲಿ ತೊಡಗಿಸಿಕೊಂಡಿದೆ. ಬಿಹಾರದ ದರ್ಭಾಂಗ ಜಿಲ್ಲೆಯ ಲಾಲ್‌ಬಾಗ್‌ನ ಪಾರಂಪರಿಕ ಕಲೆಯಾದ ಈ ಕಲೆಯನ್ನು ವಿಶ್ವ ಪ್ರಸಿದ್ಧಗೊಳಿಸಿದ್ದಾರೆ. ಮೈಸೂರಿಗೆ ಪ್ರಥಮ ಬಾರಿ ಭೇಟಿ ನೀಡಿರುವ ಅವರು ಟೋಕಿಯೋ, ವಾಷಿಂಗ್ಟನ್ ಡಿಸಿ (ಒಕ್ಲಹಾಮು ಸ್ಟೇಟ್), ಇಟಲಿಯ ಮಿಲಾನ್‌ಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಮಣ್ಣು ಬಳಿಸಿ ಪುರಾಣ ಪ್ರಸಿದ್ಧರಾದ ಗಣೇಶ, ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ನಾಗದೇವತೆ ಮುಂತಾದ ಮೂರ್ತಿಗಳನ್ನು ತಯಾರಿಸುವುದು ಇವರ ವಾಡಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement