ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎನ್‌ಟಿಎಂ ಶಾಲೆ ಉಳಿವಿಗೆ ಧರಣಿ

Mainashree
Updated On : 21 May 2014, 11:19 am

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 21
ಮಹಾರಾಣಿ ಮಾದರಿ ಕನ್ನಡ ಶಾಲೆಯ (ಎನ್‌ಟಿಎಂಎಸ್) ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರಮ ವಿರೋಧಿಸಿ ಕನ್ನಡ ಕ್ರಿಯಾ ಸಮಿತಿಯು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ಕನ್ನಡ ಸೇನೆಯವರು ಬುಧವಾರ ಪ್ರತಿಭಟಿಸಿದರು.
ಎನ್‌ಟಿಎಂ ಶಾಲೆಯನ್ನು ಹತ್ತಿರದ ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಿ, ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಸರಿಯಲ್ಲ. ಇದರ ಹಿನ್ನೆಲೆ ಹಾಗೂ ನಿಜಾಂಶ ಬಯಲು ಮಾಡಲು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಆನಂದಕುಮಾರ್, ಪದಾಧಿಕಾರಿಗಳಾದ ಬಾಲಕೃಷ್ಣ, ಬಿ.ಜೆ. ಮೋಹನ್‌ರಾಜ್, ರವಿನಾಥ್, ನಾರಾಯಣ್, ಟಿ. ದೇವರಾಜ್ ಪಟೇಲ್, ನಾಗರಾಜ್ ಅರಸ್, ಜಯರಾಮ್, ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಪ.ಮಲ್ಲೇಶ್, ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ, ಉಪಾಧ್ಯಕ್ಷ ಎಂ.ಬಿ.ವಿಶ್ವನಾಥ್, ಖಜಾಂಚಿ ಕೊ.ಸು. ನರಸಿಂಹಮೂರ್ತಿ, ಸಾಹಿತಿಗಳಾದ ಡಾ.ಸಿ.ಪಿ. ಸಿದ್ದಾಶ್ರಮ, ಡಾ.ರತಿ ರಾವ್, ಮೀರಾ ನಾಯಕ್, ಪ್ರೊ.ಶಬ್ಬೀರ್ ಮುಸ್ತಾಫ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಪಿಯುಸಿಎಲ್‌ನ ಡಾ.ವಿ.ಲಕ್ಷ್ಮಿನಾರಾಯಣ, ನಟರಾಜ್, ವಿವಿಧ ಸಂಘಟನೆಗಳ ಮುಖಂಡರಾದ ತಾಯೂರು ವಿಠ್ಠಲಮೂರ್ತಿ, ಕೆ.ಎಸ್.ಶಿವರಾಮು, ರಾಮೇಗೌಡ, ಗೊ.ಹ. ಶೆಟ್ಟಿ, ದ್ಯಾವಪ್ಪನಾಯಕ, ಪಂಪಾಪತಿ, ಬಿ.ವಾಸುದೇವ, ಶಶಿಧರ್, ಎ.ಗೋಪಾಲಚಾರ್, ಶ್ರೀಗೌರಿ ಸುಬ್ರಹ್ಮಣ್ಯ, ಮುದ್ದರಾಜ್, ಧನಂಜಯ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement