ಖಾಸಗಿ ಬಸ್ ಏಜೆಂಟರ ವರ್ತನೆ ಖಂಡಿಸಿ ಧರಣಿ
ಹನೂರು: ಕೊಳ್ಳೇಗಾಲ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಖಾಸಗಿ ಬಸ್‌ಗಳಲ್ಲಿ ಹನೂರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಲ್ಲಿ ಖಾಸಗಿ ಬಸ್ ಏಜೆಂಟರು ಹಾಗೂ ಸಿಬ್ದಂದಿ ನಿರ್ಲಕ್ಷ್ಯ ಪ್ರದರ್ಶಿಸುತ್ತಾರೆ. ಮಾತ್ರವಲ್ಲ, ಪ್ರಶ್ನಿಸಿದರೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಹನೂರಿನಲ್ಲಿ ಕೆಲಕಾಲ ಪ್ರಯಾಣಿಕರು ಪ್ರತಿಭಟಿಸಿದರು.
ಖಾಸಗಿ ಬಸ್ ಸಿಬ್ಬಂದಿ ಹಾಗೂ ಏಜೆಂಟರ ಹಾವಳಿ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಎಲ್ಲೆ ಮೀರಿದೆ. ಪ್ರಯಾಣಿಕರ ಬಗ್ಗೆ ಆಗೌರವದಿಂದ ನಡೆದುಕೊಳ್ಳುತ್ತಾರೆ. ಮ.ಬೆಟ್ಟ ಮಾರ್ಗದ ಬಸ್‌ನಲ್ಲಿ ಕುಳಿತ್ತಿದ್ದರೆ, ಕೆಳಗೆ ಇಳಿಸಿ ಉದ್ಧಟತನ ಪ್ರದರ್ಶಿಸುತ್ತಾರೆ. ಅನುಚಿತವಾಗಿ ವರ್ತಿಸುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು. ಸ್ಥಳಕ್ಕೆ ಆಗಮಿಸಿ ವೃತ್ತ ನಿರೀಕ್ಷಕ ಕಿರಣ್‌ಕುಮಾರ್ ಪ್ರತಿಭಟಾನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದರಲ್ಲದೆ, ಡಿವೈಎಸ್ಪಿ ಹಾಗೂ ತಮಗೆ ದೂರು ನೀಡಿದರೆ ಅನುಚಿತವಾಗಿ ವರ್ತಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಕೊಳ್ಳೇಗಾಲದಲ್ಲಿ ಸಭೆ ನಡೆಸಿ ಎಚ್ಚರಿಸುವ ಕೆಲಸ ಮಾಡಲಾಗುವುದು.ಪ್ರತಿಭಟನೆ ಹಿಂಪಡೆಯಿರಿ ಡಿವೈಎಸ್ಪಿ ಅವರಿಗೆ ದೂರು ನೀಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರತಿಭಟನೆ ಹಿಂಪಡೆದರು.