ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಲ ಜಂಜಾಟಕ್ಕೆ ಬಹುಗ್ರಾಮ ಸಹಕಾರಿ

Mainashree
Updated On : 21 May 2014, 10:49 am

ಮೈಸೂರು: ಮೈಸೂರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪರಿಹಾರವಾಗಿವೆ.
ಜಿಲ್ಲೆಯ ಅಕ್ಕಪಕ್ಕ ಕಾವೇರಿ ಮತ್ತು ಕಪಿಲಾ ನದಿಗಳು ಹರಿಯುತ್ತಿದ್ದರೂ ನದಿ ಮೂಲದಿಂದ ಈವರೆಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೊಂಡಿರಲಿಲ್ಲ. ಆದರೆ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ಈ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ.
ಈಗಾಗಲೇ ರೂಪಿಸುವ ಹಲವಾರು ಬಹುಗ್ರಾಮ ಯೋಜನೆಗಳ ಜೊತೆಗೆ ತಳೂರು ಸೇರಿದಂತೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೈಸೂರು ತಾಲೂಕಿನ 14 ಗ್ರಾಮಗಳಿಗೆ ಟ್ಯಾಂಕರ್ಗಳಲ್ಲಿ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಇರುವುದರಿಂದ ಆದ್ಯತೆ ಮೇರೆಗೆ ಬಹುಗ್ರಾಮ ಯೋಜನೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಜಿಪಂ ಸಿಇಒ ಪಿ.ಎ.ಗೋಪಾಲ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹುಣಸೂರು ತಾಲೂಕು ಲಕ್ಷ್ಮಣತೀರ್ಥ ನದಿ ಕಲುಷಿತವಾಗಿರುವುದರಿಂದ ಆ ನದಿಯಿಂದ ಬಹುಗ್ರಾಮ ಯೋಜನೆ ಕೈಗೊಂಡಿಲ್ಲ. ಉಳಿದಂತೆ ಎಲ್ಲಾ ತಾಲೂಕುಗಳಿಗೆ ಕಾವೇರಿ ಮತ್ತು ಕಪಿಲಾ ನದಿಗಳಿಂದ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 31 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡಿದ್ದು, 5 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 5 ಕಾಮಗಾರಿಗಳು ಪ್ರಗತಿಯಲ್ಲಿವೆ. 14 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 3ಕ್ಕೆ ಟೆಂಡರ್ ಕರೆಯಬೇಕಿದೆ. 4ಕ್ಕೆ ಅನುಮೋದನೆ ಬಾಕಿ ಇದೆ.
19 ಕೋಟಿ ಪೂರ್ಣ: ನಂಜನಗೂಡು ತಾಲೂಕು ದೊಡ್ಡಕವಲಂದೆ ಮತ್ತು 55 ಗ್ರಾಮಗಳ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು 19.07 ಕೋಟಿಗಳಲ್ಲಿ ಪೂರ್ಣಗೊಳಿಸಲಾಗಿದೆ. ಕೆ.ಆರ್. ನಗರ ತಾಲೂಕು ಗಂಧನಹಳ್ಳಿ ಮತ್ತು 3 ಗ್ರಾಮಗಳ ಸಂಯುಕ್ತ ಕುಡಿಯುವ ನೀರಿನ ಯೋಜನೆಯನ್ನು 1.36 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.
ಕೆ.ಆರ್. ನಗರ ತಾಲೂಕು ಹೊಸೂರು ಮತ್ತು ಇತರೆ 3 ಗ್ರಾಮಗಳು ಹಾಗೂ ಮೂರು ಹ್ಯಾಮ್ಲೆಟ್ಗಳ ಸಂಯುಕ್ತ ಕುಡಿಯುವ ನೀರಿನ ಯೋಜನೆಯನ್ನು 2.16 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಕೆ.ಆರ್. ನಗರ ತಾಲೂಕು ಹನಸೋಗೆ ಮತ್ತು ಇತರೆ 3 ಗ್ರಾಮಗಳ ನದಿ ನೀರಿನ ಕುಡಿಯುವ ನೀರಿನ ಕಾರ್ಯಕ್ರಮವನ್ನು 1.68 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಕೆ.ಆರ್. ನಗರ ಬಳ್ಳೂರು ಮತ್ತು ಇತರೆ 15 ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯನ್ನು 4.49 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.
ಕೆ.ಆರ್.ನಗರ ತಾಲೂಕು ಹಂಪಾಪುರ ಮತ್ತು ಇತರೆ 22 ಗ್ರಾಮಗಳ ನದಿ ನೀರಿನ ಕುಡಿಯುವ ನೀರು ಕಾರ್ಯಕ್ರಮವನ್ನು 9.30 ಕೋಟಿ ವೆಚ್ಚದಲ್ಲಿ ಕೈಗೆತ್ತಿಗೊಂಡಿದ್ದು, ಈವರೆಗೆ 2.39 ಕೋಟಿ ವೆಚ್ಚವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕೆ.ಆರ್. ನಗರ ತಾಲೂಕು ಹೆಬ್ಬಾಳು ಮತ್ತು ಇತರೆ 10 ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯನ್ನು 5.55 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು, ಈವರೆಗೆ 3.75 ಕೋಟಿ ವೆಚ್ಚ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಎಚ್.ಡಿ. ಕೋಟೆ ತಾಲೂಕು ಶಿರಮಳ್ಳಿ ಮತ್ತು ಇತರೆ 5 ಗ್ರಾಮಗಳ ಕುಡಿಯುವ ನೀರಿನ ಯೋಜನೆಯನ್ನು 1.75 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಈವರೆಗೆ 1.16 ಕೋಟಿ ವೆಚ್ಚವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಎಚ್.ಡಿ. ಕೋಟೆ ತಾಲೂಕು ಎನ್.ಬೇಗೂರು ಮತ್ತು ಇತರೆ 11 ಗ್ರಾಮಗಳಿಗೆ ಕುಡಿಯುವ ನೀರು ಕಾರ್ಯಕ್ರಮವನ್ನು 3 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು, ಈವರೆಗೆ 1.88 ಕೋಟಿ ವೆಚ್ಚವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಪುರಸ್ಕೃತ ನರ್ಮ್ ಯೋಜನೆಯಡಿ ಕಪಿಲಾ ನದಿಯಿಂದ ಮೈಸೂರು ನಗರಕ್ಕೆ ನೀರು ಪೂರೈಸುವ ಮಾರ್ಗ ಮಧ್ಯದ 30 ಗ್ರಾಮಗಳಿಗೆ ನೀರೊದಗಿಸುವ 26.14 ಕೋಟಿ ಕಾಮಗಾರಿ ಪ್ರಗತಿಯಲ್ಲಿದ್ದು, ಈವರೆಗೆ 10.50 ಕೋಟಿ ವೆಚ್ಚವಾಗಿದೆ.
ಮೈಸೂರು ತಾಲೂಕು ಯಡಕೊಳ ಮತ್ತು ಇತರೆ 34 ಗ್ರಾಮಗಳಿಗೆ 14.22 ಕೋಟಿ, ನಂಜನಗೂಡು ತಾ. ಬಿಳಿಗೆರೆ ಮತ್ತು ಇತರೆ 41 ಗ್ರಾಮಗಳಿಗೆ 25.65 ಕೋಟಿ, ವೆಚ್ಚದಲ್ಲಿ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ನಂಜನಗೂಡು ತಾಲೂಕು ಹುಲ್ಲಹಳ್ಳಿ ಮತ್ತು ಇತರೆ 123 ಗ್ರಾಮಗಳಿಗೆ 87.50 ಕೋಟಿ, ಟಿ. ಬೆಟ್ಟಹಳ್ಳಿ ಮತ್ತು ಇತರೆ 16 ಗ್ರಾಮಗಳಿಗೆ 20 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಅಂದಾಜು ಅನುಮೋದನೆ ಆಗಿದ್ದು, ಟೆಂಡರ್ ಕರೆಯಬೇಕಿದೆ.
ಟಿ.ನರಸೀಪುರ ತಾ. ಕೇತುಪುರ ಮತ್ತು ಇತರೆ 44 ಗ್ರಾಮಗಳಿಗೆ 19.01 ಕೋಟಿ, ಮನ್ನೆಹುಡಿ ಮತ್ತು ಇತರೆ 5 ಗ್ರಾಮಗಳಿಗೆ 3.96 ಕೋಟಿ, ಕೊಡಗಳ್ಳಿ ಮತ್ತು ಇತರೆ 29 ಗ್ರಾಮಗಳಿಗೆ 18.44 ಕೋಟಿ, ತುಂಬಲ ಮತ್ತು ಇತರೆ 21 ಗ್ರಾಮಗಳಿಗೆ 13.63 ಕೋಟಿ, ಕೆ.ಆರ್. ನಗರ ತಾಲೂಕು ಮಾವತ್ತೂರು ಮತ್ತು ಇತರೆ 30 ಗ್ರಾಮಗಳಿಗೆ 16.50 ಕೋಟಿ, ಮಾಳನಾಯ್ಕನಹಳ್ಳಿ ಮತ್ತು ಇತರೆ 42 ಗ್ರಾಮಗಳಿಗೆ 19 ಕೋಟಿ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ.
ಕೆ.ಆರ್. ನಗರ ತಾಲೂಕು ಲಾಲಂದೇವನಹಳ್ಳಿ ಮತ್ತು 21 ಗ್ರಾಮಗಳಿಗೆ 15 ಕೋಟಿ, ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ, ಜಿನ್ನಹಳ್ಳಿ ಮತ್ತು ಇತರೆ 52 ಗ್ರಾಮಗಳಿಗೆ 26.05 ಕೋಟಿ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಅಂದಾಜು ಅನುಮೋದನೆ ಬಾಕಿ ಇದೆ.
ಎಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ, ಸಾಗರೆ ಮತ್ತು ಇತರೆ 12 ಗ್ರಾಮಗಳಿಗೆ 6.88 ಕೋಟಿ, ಮಾದಾಪುರ ಮತ್ತು ಇತರೆ 41 ಗ್ರಾಮಗಳಿಗೆ 16.69 ಕೋಟಿ, ತುಂಬುಸೋಗೆ ಮತ್ತು ಇತರೆ 10 ಗ್ರಾಮಗಳಿಗೆ 11.23 ಕೋಟಿ, ಹಂಚೀಪುರ ಮತ್ತು ಇತರೆ 17 ಗ್ರಾಮಗಳಿಗೆ 8.54 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಟೆಂಡರ್ ಕರೆಯಲಾಗಿದೆ. ಹಿರೇಹಳ್ಳಿ ಮತ್ತು ಇತರೆ 23 ಗ್ರಾಮಗಳಿಗೆ 16.39 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಅಂದಾಜು ಅನುಮೋದನೆ ಬಾಕಿ ಇದೆ.
ಪಿರಿಯಾಪಟ್ಟಣ ತಾ. ಕೊಪ್ಪ ಮತ್ತು ಇತರೆ 11 ಗ್ರಾಮಗಳಿಗೆ 9.50 ಕೋಟಿ, ದೊಡ್ಡ ಹರವೆ ಮತ್ತು ಇತರೆ 19 ಗ್ರಾಮಗಳಿಗೆ 16.38 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಟೆಂಡರ್ ಕರೆಯಲಾಗಿದೆ. ಕಿತ್ತೂರು ಮತ್ತು ಇತರೆ 13 ಗ್ರಾಮಗಳಿಗೆ 5.60 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಅಂದಾಜು ಅನುಮೋದನೆ ಬಾಕಿ ಇದೆ. ಕಣಗಾಲು ಮತ್ತು ಇತರೆ 15 ಗ್ರಾಮಗಳಿಗೆ 9.80 ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಅಂದಾಜು ಅನುಮೋದನೆ ಆಗಿದ್ದು, ಟೆಂಡರ್ ಕರೆಯಲಾಗಿದೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement