ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೈಕ್‌ನಿಂದ ಆಯತಪ್ಪಿ ಬಿದ್ದು ಪೇದೆ ಸಾವು

Mainashree
Updated On : 21 May 2014, 10:11 am

ಕೊಳ್ಳೇಗಾಲ: ಬೈಕ್‌ನಿಂದ ಅಯತಪ್ಪಿ ಬಿದ್ದು ಡಿವೈಎಸ್ಪಿ ವಿಚಕ್ಷಣ ದಳದ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಪೇದೆ ಗುರುಸ್ವಾಮಿ ನಾಯ್ಕ(34) ಬೈಕ್‌ನಲ್ಲಿ ಬರುವಾಗ ಮಾರ್ಗಮಧ್ಯೆ ಮಹಾಲಿಂಗನಕಟ್ಟೆ ಬಳಿ ಅಯತಪ್ಪಿ ಬಿದ್ದು ಸಾವನ್ನಪ್ಪಿದವರು. ಶಿರಗೋಡು ಮಹಾಲಿಂಗನಕಟ್ಟೆ ರಸ್ತೆ ಮಧ್ಯದಲ್ಲಿ ಗುರುಸ್ವಾಮಿನಾಯ್ಕ ಆಗಮಿಸುತ್ತಿದ್ದ ವೇಳೆ ಹಸುವೊಂದು ಅಡ್ಡಬಂದ ಹಿನ್ನೆಲೆ ಬೈಕ್ ನಿಯಂತ್ರಿಸಲಾಗದೆ ಅಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಮೃತರಿಗೆ ಪತ್ನಿ ಸವಿತಾ, ಪುತ್ರಿಯರಾದ ಭೂಮಿ, ಸಿಂಧು, ತಂದೆ-ತಾಯಿ ಇದ್ದಾರೆ.  ಎಸ್ಪಿ ಭೇಟಿ: ಮೃತ ಪೇದೆ ಮನೆಗೆ ಜಿಲ್ಲಾ ವರಿಷ್ಠಾಧಿಕಾರಿ ರವೀಂದ್ರಪ್ರಸಾದ್, ಡಿವೈಎಸ್ಪಿ ಚನ್ನಬಸವಣ್ಣ, ವೃತ್ತ ನಿರೀಕ್ಷಕ ಕಿರಣಕುಮಾರ್ ಸೇರಿದಂತೆ ಅಪಾರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮೃತ ಪೇದೆ ಪತ್ನಿ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಬುಧವಾರ ಮಧ್ಯಾಹ್ನ ಪೇದೆ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.  
ಗಳಗಳನೆ ಅತ್ತ ಡಿವೈಎಸ್ಪಿ: ತಮ್ಮ ವಿಚಕ್ಷಣಾ ದಳದಲ್ಲಿ ಉತ್ತಮ ಪೇದೆಯಾಗಿ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುರುಸ್ವಾಮಿನಾಯ್ಕ ದುರಂತ ಸಾವಿಗೀಡಾದದ್ದು ನೆನೆದು ಗಳಗಳನೆ ಡಿವೈಎಸ್ಪಿ ಚನ್ನಬಸವಣ್ಣ ಲಂಗೋಟಿ ಕಣ್ಣಿರು ಹಾಕುವ ಮೂಲಕ ಪೇದೆಯ ಬಗ್ಗೆ ತಮ್ಮಗಿದ್ದ ಗೌರವ ಹಾಗೂ ಅಭಿಮಾನ ತೋರ್ಪಡಿಸಿಕೊಂಡರು. ಮಂಗಳವಾರ ಶವಾಗಾರದಲ್ಲೇ  ಅಳುತ್ತಾ ನಿಲ್ಲುವ ಮೂಲಕ ಕೆಲಕಾಲ ವಿಚಲಿತರಂತೆ ಕಂಡು ಬಂದ ಡಿವೈಎಸ್‌ಪಿ ಬುಧವಾರ ಮಹ್ಯಾಹ್ನದವರೆವಿಗೂ ಕರವಸ್ತ್ರ ಮುಚ್ಚಿಕೊಂಡುಪೇದೆ ಅಗಲಿಕೆಗಾಗಿ ಖಿನ್ನರಾಗಿದ್ದರು.  
ಸಿಎಂ ಪದಕಕ್ಕೆ ಶಿಫಾರಸ್ತು: ದುರಂತ ಸಾವಿಗೀಡಾದ ಪೇದೆಯ ಸೇವಾನಿಷ್ಠೆ ಗುರುತಿಸಿ ಈ ಬಾರಿ ಮುಖ್ಯಮಂತ್ರಿ ಪದಕ ನೀಡಲು ಪೊಲೀಸ್ ಇಲಾಖೆ ಶಿಫಾರಸು ಮಾಡಲಾಗಿತ್ತು. ಹನೂರು, ಮಹದೇಶ್ವರ ಬೆಟ್ಟಗಳ ಠಾಣೆಗಳಲ್ಲಿ 10ವರ್ಷ ಹಾಗೂ ಡಿವೈಎಸ್ಪಿ ವಿಚಕ್ಷಣಾ ದಳದಲ್ಲಿ ಕಳೆದ 2ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗುರುಸ್ವಾಮಿ ನಾಯಕ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರೀತಿ ಪಾತ್ರನಾಗಿದ್ದರು. ಅಲ್ಲದೆ ಗಾಂಜಾ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳ ತನಿಖೆ ವೇಳೆ 180ಕ್ಕೂ ಆರೋಪಿಗಳ ಸೆರೆ ಸಂದರ್ಭದಲ್ಲಿ ತಮ್ಮನ್ನು ಸಾಹಸಿ ಪೊಲೀಸ್ ವೃತ್ತಿಯಲ್ಲಿ ತೊಡಗಿಸಿಕೊಂಡು ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೂ ಬಾಜನನಾಗಿದ್ದ. ಪೇದೆಯ ಅಂತಿಮ ದರ್ಶನದ ಬಳಿಕ ಮಾತನಾಡಿದ ಎಸ್ಪಿ ರವಿಂದ್ರ ಪ್ರಸಾದ್ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಪೇದೆ ಕುಟುಂಬಕ್ಕೆ ತಲುಪಿತ್ತೇನೆ ಎಂದರು.
ಕುಟುಂಬದವರ ರೋದನ: ಪೇದೆ ಗುರುಸ್ವಾಮಿನಾಯ್ಕ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಪತಿ ಸವಿತಾ ಸೇರಿದಂತೆ ಅಪಾರ ಬಂಧುಗಳ ರೋದನ ಮುಗಿಲು ಮುಟ್ಟುವಂತಿತ್ತು. ಮೃತ ಪೇದೆ ಅಂತ್ಯಕ್ರಿಯೆ ವೇಳೆ ರಾಮಾಪುರ ವೃತ್ತ ನಿರೀಕ್ಷಕ ರಾಜಣ್ಣ, ಪಿಎಸ್‌ಐಗಳಾದ ಶ್ರೀಕಾಂತ್, ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement