ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೈಪಾಸ್‌ನಲ್ಲಿ ಅಕ್ರಮ ಹೊಟೇಲ್

Mainashree
Updated On : 22 May 2014, 11:36 am

ಕ.ಪ್ರ.ವಾರ್ತೆ ್ಣ ಹುಣಸೂರು ್ಣ ಮೇ 22
ಪಟ್ಟಣದ ಬೈಪಾಸ್ ರಸ್ತೆಯ ಅಕ್ಕಪಕ್ಕದ ಕೈಗಾರಿಕಾ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಹೊಟೇಲ್, ಅಂಗಡಿ ನಿರ್ಮಿಸಿದ್ದಾರೆ. ಕೆಲವರು ನಿವೇಶನ ರಚಿಸಿ, ಮಾರಾಟ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ವಾರದೊಳಗೆ ಸಮಗ್ರ ವರದಿ ನೀಡುವಂತೆ ಕೈಗಾರಿಕಾ ವಿಸ್ತರಣಾಧಿಕಾರಿ ಗಡ್ಕರಿ ಅವರಿಗೆ ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದ ಆಸ್ತಿಯನ್ನು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿ ರಕ್ಷಿಸಬೇಕೆಂದು ಸೂಚಿಸಿದರು.
ಕಳೆದೊಂದು ವರ್ಷದಿಂದ ಸ್ಥಗಿತಗೊಳಿಸಿರುವ ಪಟ್ಟಣದ ಬಾಲಕಿಯರ ಕಾಲೇಜು ಹಾಗೂ ಹಾಸ್ಟೆಲ್ ಹಾಗೂ ರತ್ನಪುರಿಯ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ನ ಸ್ಥಗಿತಗೊಂಡಿರುವ ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಭೂಸೇನಾ ನಿಗಮಕ್ಕೆ ಆದೇಶಿಸಿದರು. ಇದಕ್ಕೆ ಉತ್ತರ ನೀಡಿದ ಎಇಇ ರವೀಂದ್ರ ಮಾತನಾಡಿ, ಅನುದಾನ ಕೊರತೆಯಿಂದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಶಾಸಕರು ಕಾಮಗಾರಿ ನಡೆಯಬೇಕಾದರೆ ಮೊದಲೇ ಹಣ ಡಿಪಾಸಿಟ್ ಮಾಡಿಸಿಕೊಳ್ತೀರಾ, ಕನಿಷ್ಠ ಶಾಲೆ- ಹಾಸ್ಟೆಲ್ ಕಟ್ಟಡ ಪೂರ್ಣಗೊಳಿಸದೆ ಹಾಸ್ಟೆಲ್‌ಗಳು ಅಭದ್ರ ಕಟ್ಟಡದಲ್ಲಿ ನಡೆಯುತ್ತಿವೆ. ನಿಗಮದ ಅಧ್ಯಕ್ಷರೊಂದಿಗೆ ಚರ್ಚಿಸಿ ಪೂರ್ಣಗೊಳಿಸುವಂತೆ ಸೂಚಿಸಿದರು.ಪಟ್ಟಣದ ಟಿಎಪಿಸಿಎಂಎಸ್ ರಸ್ತೆಯಲ್ಲಿರುವ ಅಸ್ಥಿರ ರೇಷ್ಮೆ ಮಾರುಕಟ್ಟೆಯನ್ನು ಶೀಘ್ರ ಕೆಡವಲು ಕ್ರಮ ಕೈಗೊಳ್ಳಬೇಕು ಹಾಗೂ ರೇಷ್ಮೆ ಬೆಳೆ ಅಭಿವೃದ್ಧಿಗೊಳಿಸಿ ತಂಬಾಕಿಗೆ ಪರ್ಯಾಯ ಬೆಳೆಯನ್ನಾಗಿಸಬೇಕೆಂದು ಸಹಾಯಕ ನಿರ್ದೇಶಕ ರಾಜೇಂದ್ರ ಅವರಿಗೆ ಹೇಳಿದರು.
ಬಿತ್ತನೆ ಬೀಜ ಕೊರತೆ ಇಲ್ಲ: ಹೋಬಳಿಗೊಂದು ಸಾವಯವ ಗ್ರಾಮ ಮಾಡುವ ಹಾಗೂ ಕಸಬಾ ಹೋಬಳಿಯನ್ನು ಕೆ.ಕಿಸಾನ್ ಎಂಬ ಯೋಜನೆ ಜಾರಿಗೆ ತಂದಿದ್ದು, ಪ್ರಾಯೋಗಿಕವಾಗಿ ಆಧಾರ್ ಮಾದರಿಯಲ್ಲಿ ಜಮೀನಿನ ಮಾಹಿತಿಯನ್ನು ದಾಖಲುಗೊಳಿಸುವ ಯೋಜನೆ ಜಾರಿಗೆ ತಂದಿದೆ. ವಾಡಿಕೆ ಮಳೆಯ ಈಗಾಗಲೇ ಬಿದ್ದಿದೆ. ಬಿತ್ತನೆ ಬೀಜ ಕೊರತೆ ಇಲ್ಲವೆಂದು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ತಿಳಿಸಿದರು.
ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ಹಾಗೂ ಮತ್ತಿಗೋಡು ವ್ಯಾಪ್ತಿಯಲ್ಲಿ ರೇಲ್ವೆ ಕಂಬಿಯ ತಡೆಗೋಡೆ ನಿರ್ಮಿಸಲು 105 ಟನ್ ಕಬ್ಬಿಣ ಬಂದಿದೆ. ಆನೆ ಹಾವಳಿ ತಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಪ್ಪ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ಉಪಾಧ್ಯಕ್ಷೆ ಜಯರತ್ನ ಮಹೇಂದ್ರ, ಜಿಪಂ ಸದಸ್ಯರಾದ ಡಾ. ಪುಷ್ಪಾಅಮರನಾಥ್, ದೇವರಾಜ್, ರಮೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಭಾಕರ್, ತಹಸೀಲ್ದಾರ್ ವೆಂಕಟಾಚಲಪ್ಪ, ಇಒ ಡಾ.ಪ್ರೇಮಕುಮಾರ್, ಬಿಇಒ ರಾಜಶೇಖರ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement