ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೀನುಗಾರರ ಮೇಲೆ ಹಲ್ಲೆ: ಆರೋಪ

Mainashree
Updated On : 22 May 2014, 11:36 am

ಕ.ಪ್ರ.ವಾರ್ತೆ ್ಣ ಕೆ.ಆರ್. ನಗರ ್ಣ ಮೇ 22
ಕೆಆರ್‌ಎಸ್ ಹಿನ್ನೀರಿನಲ್ಲಿ ಮೀನು ಹಿಡಿಯುತ್ತಿರುವವರ ಮೇಲೆ ಗುತ್ತಿಗೆದಾರ ನಂಜೇಗೌಡ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆಗೊಳಗಾದ ಮೂವರು ಆಸ್ಪತ್ರೆ ಸೇರಿರುವ ಘಟನೆ ಗುರುವಾರ ನಡೆದಿದೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ಹಂಪಾಪುರ ಮೀನುಗಾರರ ಸಹಕಾರ ಸಂಘದ ಸದಸ್ಯರಾಗಿರುವ ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದ ಮಹದೇವನಾಯಕ, ವೆಂಕಟೇಶ್ ಮತ್ತು ಮಹದೇವ್ ಅವರ ಮೇಲೆ ನಂಜೇಗೌಡ ನೇಮಿಸಿರುವ ಕಾವಲುಗಾರರಾದ ದಕ್ಷಿಣಮೂರ್ತಿ, ರಘು, ಮಹಾಲಿಂಗ, ಮಧು ಇನ್ನಿತರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಸುದ್ದಿಗಾರರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ ಮೀನುಗಾರರಾದ ಕುಮಾರ್, ಲೋಕೇಶ್, ಶಿವಲಿಂಗಯ್ಯ, ಬಸವರಾಜು, ರವಿ ಅವರು ಹಂಪಾಪುರ ಮೀನುಗಾರರ ಸಹಕಾರ ಸಂಘದ ಸದಸ್ಯರಾಗಿ ಸರ್ಕಾರದ ನಿಯಮದಂತೆ ಮೀನುಗಾರಿಕೆ ಮಾಡುತ್ತಿರುವ ನಮಗೆ ನಂಜೇಗೌಡ ಮತ್ತವರ ಬೆಂಬಲಿಗರು ಹಿಂದಿನಿಂದಲೂ ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಹೊಸೂರು ಕಲ್ಲಹಳ್ಳಿ ಗ್ರಾಮದ ಸಮೀಪ ಎಂದಿನಂತೆ ಮೀನು ಬೇಟೆಗೆ ಇಳಿದಾಗ ನಂಜೇಗೌಡನ ಬೆಂಬಲಿಗರು ಸರ್ಕಾರದ ನಿಯಮ ಮೀರಿ ಬಲೆ ಬಳಸಿದರು. ಇದನ್ನು ಪ್ರಶ್ನಿಸಿದ ಬಡ ಮೀನುಗಾರರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಎಸ್‌ಐ ಷಣ್ಮುಗಂ ಸ್ಥಳಕ್ಕೆ ಭೇಟಿ ನೀಡಿದ್ದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಅಕ್ರಮದ ಬಗ್ಗೆ ಬಡ ಮೀನುಗಾರು ಮತ್ತು ಕೂಲಿಕಾರರು ಪ್ರಶ್ನಿಸಿದರೆ  ಬೆಸ್ತರು, ತಮಿಳರು ಹಾಗೂ ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸದಿದ್ದರೆ ಕೆ.ಆರ್. ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement