ಹಳ್ಳಿಯೆಡೆಗೆ ಪರಿಷತ್ತಿನ ನಡಿಗೆ ಸ್ವಾಗತಾರ್ಹ
ಕ.ಪ್ರ.ವಾರ್ತೆ ್ಣ ರಾವಂದೂರು ್ಣ ಮೇ 22
ಶತಮಾನದ ಸಂಭ್ರಮದಲ್ಲಿರುವ ಸಾಹಿತ್ಯ ಪರಿಷತ್ತು ಹಳ್ಳಿಯೆಡೆಗೆ ಪರಿಷತ್ತಿನ ನಡಿಗೆ ಎಂಬ ಧ್ಯೇಯವಾಕ್ಯ ಅಡಿಯಲ್ಲಿ ಎಲ್ಲೆಡೆ ಘಟಕಗಳನ್ನು ತೆರೆಯುತ್ತಿರುವುದು ಶ್ಲಾಘನೀಯ ಎಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಕಸಾಪ ಹೋಬಳಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, 6.5 ಕೋಟಿ ಕನ್ನಡಿಗರ ಪ್ರತಿನಿಧಿ ಸಂಸ್ಥೆಯಾದ ಕಸಾಪ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪಿತವಾಗಿದ್ದು, ಕರ್ನಾಟಕ ಏಕೀಕರಣ, ಸಾಹಿತ್ಯ, ಸಂಸ್ಕೃತಿಯನ್ನು ಜೀವಂತಗೊಳಿಸುತ್ತಿದೆ. ಕನ್ನಡಿಗರೆಲ್ಲರೂ ಇದಕ್ಕೆ ಕೈಜೋಡಿಸಬೇಕು. ಗ್ರಾಮ ಘಟಕಗಳ ಮೂಲ ನಾಡು ನುಡಿಯ ಸಂರಕ್ಷಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲೂಕು ಕಸಾಪವು ಗ್ರಾಮ ಘಟಕ, ಹೋಬಳಿ ಘಟಕ, ಶಾಲಾ ಘಟಕಗಳನ್ನು ಸ್ಥಾಪಿಸಿ ಅವುಗಳ ಮೂಲಕ ದಾಸರ, ಶರಣರ, ಕವಿಗಳ, ನೂರೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮೋಕ್ಷಪತಿ ಸ್ವಾಮೀಜಿ, ರಾವಂದೂರು ಘಟಕದ ಅಧ್ಯಕ್ಷ ಆರ್.ಎಸ್. ಮಹೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಬೆಟ್ಟದಪುರ ಅಧ್ಯಕ್ಷ ಅನಿತತೋಟ್ಟಪ್ಪ ಶೆಟ್ಟಿ, ಕಾರ್ಯದರ್ಶಿ ಮುಕುಂದ, ಕಗ್ಗುಂಡಿ ಗ್ರಾಮ ಘಟಕದ ಕಾರ್ಯದರ್ಶಿ ರಾಜು, ಆರ್.ಟಿ. ಸತೀಶ್ ಇದ್ದರು.