ಅನಂತಮೂರ್ತಿ ವಿರುದ್ಧ ಅವಹೇಳನ: ಪ್ರತಿಭಟನೆ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 23
ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರಿಗೆ ನೈತಿಕ ಬೆಂಬಲ ಸೂಚಿಸಿ ಹಾಗೂ ಅವರ ವಿರುದ್ಧ ಅವಹೇಳನ ಖಂಡಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿತು.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಡಾ. ಅನಂತಮೂರ್ತಿ ಅವರು ತಮ್ಮ ಅಭಿಪ್ರಾಯ ಹೊರ ಹಾಕಿದ್ದರು. ಭಾವೋದ್ವೇಗದಲ್ಲಿ ಮಾತನಾಡಿದ್ದನ್ನೇ ಮುಂದಿಟ್ಟುಕೊಂಡು ಕಿಡಿಗೇಡಿಗಳು ಬೆದರಿಕೆ ಹಾಕಿ ಆ ಮೂಲಕ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ಖಂಡಿಸಿದರು.
ಅನಂತಮೂರ್ತಿ ಅವರು ದೇಶದ್ರೋಹಿ ಹೇಳಿಕೆ ನೀಡಿಲ್ಲ. ಮೌಢ್ಯದಿಂದ ಹೊರ ಬಾರಲಾಗದ ಜನ ರಸ್ತೆಯಲ್ಲಿ ನಿಂತು ಅವಾಂತರ ಸೃಷ್ಟಿಸುತ್ತಿದ್ದಾರೆ. ಕೆಟ್ಟದಾಗಿ ಪತ್ರಗಳನ್ನು ಬರೆಯುತ್ತಿರುವುದು, ಬೆದರಿಕೆ ಹಾಕುತ್ತಿರುವುದು ದೇಶದ ನೈತಿಕತೆಯನ್ನು ಪ್ರಶ್ನಿಸಿದಂತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಇನ್ನಾದರೂ ತಮ್ಮ ನಿಲುವು ಬದಲಿಸಿ ನಾಗರಿಕರಂತೆ ವರ್ತಿಸುವುದನ್ನು ಕಲಿಯಬೇಕು. ಇಲ್ಲದಿದ್ದರೆ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು ಪ್ರಜ್ಞಾವಂತ ಜನ ಬೀದಿಗಿಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಜಿಲ್ಲಾಧ್ಯಕ್ಷ ಸಿ. ನಾಗಣ್ಣ, ಬೀರಪ್ಪ, ಶಶಿಧರ ಸಂಗಾಪುರ, ಚಂದ್ರು, ರಾಜೇಶ್, ಕೆ.ಆರ್. ಬಾಬು, ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.