ಕಾಂಗ್ರೆಸ್ ಸೋಲಿಗೆ ದಲಿತರ ಕಡೆಗಣನೆ ಕಾರಣ
ಮೈಸೂರು: ರಾಷ್ಟ್ರದಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನ ಪಡೆದಿರುವುದು ಅವಮಾನ ಎಂದು ಮಾನಸಗಂಗೋತ್ರಿಯ ಧಮ್ಮದೀಪ ಪ್ರತಿಷ್ಠಾನದ ಅಧ್ಯಕ್ಷ ಚಿಂ.ಬ. ಬಸವರಾಜು ಹೇಳಿದ್ದಾರೆ. ಈ ರೀತಿಯ ಹೀನಾಯ ಸೋಲು ದುರದೃಷ್ಟಕರ. ದಲಿತರನ್ನು ಕಡೆಗಣಿಸಿದ್ದಕ್ಕೆ ಇದಕ್ಕೆ ಮುಖ್ಯ ಕಾರಣ. ರಾಜಕೀಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕೀಯದಲ್ಲಿದ್ದರೆ ಮುಖ್ಯಮಂತ್ರಿ ಆಕಾಂಕ್ಷಿಯಾಗುತ್ತಾರೆ ಎಂದು ಅವರನ್ನು ಕೇಂದ್ರ ಸರ್ಕಾರಕ್ಕೆ ಕರೆಸಿಕೊಂಡದ್ದು, ಡಾ.ಜಿ.ಪರಮೇಶ್ವರ್ ಅವರು ಚುನಾವಣೆಯಲ್ಲಿ ಗೆದ್ದು ಬಂದರೆ ಮುಖ್ಯಮಂತ್ರಿ ರೇಸ್ನಲ್ಲಿ ಮುಂದಿರುತ್ತಾ ಎಂದು ಪ್ರಮುಖ ಮುಖಂಡರೆಲ್ಲರೂ ಸೇರಿ ಸೋಲಿಸಿದರು ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ಗೆ ಉಳಿಗಾಲ. ಇಲ್ಲದಿದ್ದರೆ ದಲಿತರ ಮುಂದಿನ ನಡಿಗೆ ಆರೋಗ್ಯ ಮತ್ತು ನೆಮ್ಮದಿ ಸಿಗುವ ಕಡೆಗೆ ಎಂದು ಹೇಳಿದರು.