ಕೊಚಾಡಿಯನ್ಗೆ ಅಭಿಮಾನಿಗಳ ಸಂಭ್ರಮ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 23
ಖ್ಯಾತ ನಟ ರಜನಿಕಾಂತ್ ಅಭಿನಯದ ಕೊಚ್ಚಾಡಿಯನ್ ತಮಿಳು ಚಿತ್ರ ಶುಕ್ರವಾರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮ ಆಚರಿಸಿದರು. ಅಖಿಲ ಕರ್ನಾಟಕ ಅರುಣಾಚಲಂ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಸಂಘದವರು ನಗರದ ರಾಜ್ಕಮಲ್ ಚಿತ್ರಮಂದಿರದ ಬಳಿ ರಜನಿಕಾಂತ್ ಭಾವಚಿತ್ರಕ್ಕೆ ಹಾಲಾಭಿಷೇಕ ಮಾಡಿದರು. ಬಳಿಕ ಬಡವರಿಗೆ ಸೀರೆ, ಪಂಚೆ, ಟವಲ್ ವಿತರಿಸಿದರು. ಅಲ್ಲದೆ, ಚಿತ್ರ ನೋಡಲು ಬಂದಿದ್ದ ಅಭಿಮಾನಿಗಳಿಗೆ ಸಿಹಿ ಹಂಚಿ, ಕೊಚ್ಚಾಡಿಯನ್ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು. ಸಂಘದ ಅಧ್ಯಕ್ಷ ಎನ್. ಮಾರ ನೇತೃತ್ವ ವಹಿಸಿದ್ದರು.