ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾನತೆ ಅಗತ್ಯ

Mainashree
Updated On : 24 May 2014, 9:20 am

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 24
ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾನತೆ ಅಗತ್ಯ. ಯಾವುದೇ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಲು ಅಸಮಾನತೆ ನಿವಾರಣೆಯಾದಾಗ ಮಾತ್ರ ಸಾಧ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಅಭಿವೃದ್ಧಿ ಸಂಶೋಧನಾ ಸಂಸ್ಥೆಯು ಮಲೇಷಿಯಾದ ಪುತ್ರ ವಿವಿ, ಇರಾನ್‌ನ ಇಸ್ಲಾಮಿಕ್ ಆಜಾದ್ ವಿವಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾನತೆ ಮತ್ತು ಸುಸ್ಥಿರ ಮಾನವ ಅಭಿವೃದ್ಧಿ- ಸಮಸ್ಯೆಗಳು ಮತ್ತು ನೀತಿ ನಿಯಮಗಳ ತೊಡಕುಗಳು ಕುರಿತ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಭೆ ಇದ್ದರೂ ಅವಕಾಶ ಸಿಗದೆ ಹಲವರಿದ್ದಾರೆ. ಅಂತಹವರಿಗೆ ಸಮಾನ ಅವಕಾಶ ಕಲ್ಪಿಸಬೇಕಿದೆ. ದೇಶದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಒದಗಿಸುವ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಒಂದು ವೇಳೆ ತಾರತಮ್ಯ ಮುಂದುವರೆದರೇ ಅದುವೇ ಅಪಾಯ ಕಾರಣವಾಗಬಹುದು ಎಂದರು.
ವಿಶ್ವದ ಎಲ್ಲ ಕಡೆಗಳಲ್ಲೂ ಕುಟುಂಬ, ಜಾತಿ, ಧರ್ಮಗಳಲ್ಲಿ ಅಸಮಾನತೆ ಇದೆ. ಇದನ್ನು ಹೊಗಲಾಡಿಸಿದಾಗ ಮಾತ್ರ ಸಮಾನತೆ ಸಾಧ್ಯ. ಅಸಮಾನತೆ ಹೋಗಲಾಡಿಸಿ ಮನುಷ್ಯರ ಜೀವನ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಮೇಲಿದೆ ಎಂದು ಅವರು ತಿಳಿಸಿದರು.ನಮ್ಮ ದೇಶಕ್ಕೆ ಮಾತ್ರ ಅಸಮಾನತೆ ಸೀಮಿತವಾಗಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಅಸಮಾನತೆ ಜೀವಂತ ಆಗಿದೆ. ಇದು ಮಾನವ ಅಭಿವೃದ್ಧಿಗೆ ತೊಡಕಾಗುವ ಸಂಗತಿ. ಹೀಗಾಗಿ ಅರ್ಥಶಾಸ್ತ್ರಜ್ಞರು, ರಾಜಕೀಯ ತಜ್‌ಞ, ಪರಿಸರಶಾಸ್ತ್ರಜ್ಞರು ಸೇರಿದಂತೆ  ಪರಿಣಿತರು ಅಸಮಾನತೆ ಹೊಗಲಾಡಿಸಲು ಚಿಂತಿಸಿ ಪರಿಹಾರ ಸೂಚಿಸಬೇಕಿದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಬೆಳಕು ಚೆಲ್ಲುತ್ತಿರುವುದು ಶ್ಲಾಘನಿಯ. ಸಮ್ಮೇಳನದಲ್ಲಿ ಚರ್ಚೆಯಾಗುವ ಅಂಶಗಳನ್ನು ಅನುಷ್ಠಾನಗೊಳಿಸಲು ಮೈಸೂರು ವಿವಿ ಬದ್ಧವಾಗಿದೆ ಎಂದು ಅವರು ಆಶ್ವಾಸನೆ ನೀಡಿದರು.
ಸಮಾನತೆ ಮತ್ತು ಸುಸ್ಥಿರ ಮಾನವ ಅಭಿವೃದ್ಧಿ ವಿಷಯ ಕುರಿತು ಮಲೇಷಿಯಾದ ಪುತ್ರ ವಿವಿಯ ಸಮಾಜ ಅಧ್ಯಯನ ವಿಭಾಗದ ಸಂಶೋಧಕ ಡಾ. ಜೆಫ್ರಿ ಲಾರೆನ್ಸ್ ಡಿಸಿಲ್ವಾ ಪ್ರಾಸ್ತಾವಿಕ ಭಾಷಣ ಮಾಡಿದರು.
ಇದೇ ವೇಳೆ ಸಮ್ಮೇಳನದ ಅಂಗವಾಗಿ ಹೊರತಂದಿರುವ ಎರಡು ಪುಸ್ತಕಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಉತ್ತಮ ಸಂಶೋಧನಾ ಪ್ರಬಂಧ ಮಂಡನೆಗಾಗಿ ಆಂಧ್ರಪ್ರದೇಶದ ನಾಗಾರ್ಜುನ ವಿವಿ ಗ್ರಾಮೀಣಾ ಅಧ್ಯಯನ ವಿಭಾಗದ ಡಾ.ವಿ. ದಿವ್ಯತೇಜೋಮೂರ್ತಿ ಅವರಿಗೆ ಬಹುಮಾನ ವಿತರಿಸಲಾಯಿತು.
ಬೆಂಗಳೂರು ವಿವಿ ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್. ಇಂದುಮತಿ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಚಿಕ್ಕಪ್ಪಯ್ಯ, ಸಮ್ಮೇಳನದ ಸಂಯೋಜಕ ಡಾ.ಎಂ. ಚೌಡೇಗೌಡ ಇದ್ದರು. ಸಮ್ಮೇಳನದ ನಿರ್ದೇಶಕ ಡಾ.ಕೆ. ಶಿವಚಿತ್ತಪ್ಪ ಸ್ವಾಗತಿಸಿದರು. ಬೆಂಗಳೂರು ಮಹಾರಾಣಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ.ಎಂ. ಮಧುಮತಿ ಸಮ್ಮೇಳನ ಕುರಿತು ವಿವರಿಸಿದರು. ಸಂಘಟನಾ ಕಾರ್ಯದರ್ಶಿ ವಿ. ರಾಜಗೋಪಾಲ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement