ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೈಜ್ಞಾನಿಕವಲ್ಲದ ಧರ್ಮ ಉಳಿಯದು

Mainashree
Updated On : 25 May 2014, 9:39 am

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 25
ವೈಜ್ಞಾನಿಕ ಚಿಂತನೆಗೆ ಒಳಗಾಗದ ಧರ್ಮ ಉಳಿಯದು ಎಂದು ಕೋಡಿ ಮಠದ ಶ್ರೀ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿದರು.
ಮೈಸೂರು ವೀರಶೈವ ಸಜ್ಜನ ಸಂಘ ಮಂಡಿಮೊಹಲ್ಲಾದ ಶ್ರೀ ಕಂಠಿಮಲ್ಲಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಬಸವ ಯುಗ ಕ್ರಾಂತಿ ಯುಗವಾಗಿತ್ತು. ಮನುಕುಲದ ಉದ್ಧಾರದ ಕಾಲವಾಗಿತ್ತು. ಇಟ್ಟು ಪೂಜಿಸುತ್ತಿದ್ದ ಲಿಂಗವನ್ನು ಕೊರಳಿಗೆ ಕಟ್ಟಿ ಪೂಜಿಸಲಾಯಿತು. ಬಸವಣ್ಣನವರ ವೀರಶೈವ ಚಿಂತನೆ ವೈಜ್ಞಾನಿಕವಾಗಿತ್ತು. ಏಕೆಂದರೆ ಲಿಂಗಕ್ಕೆ ಅವರು ಗುಂಡಾದ ಭೂಮಿಯ ರೂಪ ಕೊಟ್ಟು ಪೂಜಿಸಿದರು. ಹಾಗೆ ವೈಜ್ಞಾನಿಕ ಚಿಂತನೆಗೆ ಒಳಗಾಗದ ಧರ್ಮ ಉಳಿಯುವುದಿಲ್ಲ ಎಂದರು.
ಬಸವಣ್ಣನವರ ಬಗ್ಗೆ ಅನೇಕ ಅಪಪ್ರಚಾರ ಮಾಡಲಾಯಿತು. ಅವರಿಗೆ ಇಬ್ಬರು ಹೆಂಡತಿಯರು ಇದ್ದುದಾಗಿ ಹೇಳಿದರು. ಆದರೂ ಅವರ ಎದೆಗುಂದಲಿಲ್ಲ. ದೇವದಾಸಿ ಪದ್ಧತಿಯ ವಿರುದ್ಧ ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಹೋರಾಡಿದರು. ಹೀಗೆ ಬಸವಣ್ಣನವರ ಬಗ್ಗೆ ಹೇಳಿದರೆ ದಿನಗಳೆ ಬೇಕು.
ಇಂದು ಭಾನುವಾರ ಮಠದಲ್ಲಿಯೆ ಇದಿದ್ದರೆ ಶಾಸ್ತ್ರ ಕೇಳುವವರು ನೂರಾರು ಮಂದಿ ಬರುತ್ತಿದ್ದರು. ಸಾಮಾನ್ಯವಾಗಿ ಭಾನುವಾರ ಎಲ್ಲಿಯೂ ಹೋಗುವುದಿಲ್ಲ. ನಿಮ್ಮ ಪ್ರೀತಿ ಮತ್ತು ಒತ್ತಾಯದಿಂದ ಬಂದಿದ್ದೇನೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು  ಅವರು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಎಂ.ಎನ್. ಬಸವರಾಜ್, ಪ್ರಾಧ್ಯಾಪಕ ಡಾ.ಆರ್. ಜಗದೀಶ್, ಎಸ್‌ಐ ಎಸ್. ವಿನುತಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಾಗರ್‌ಕುಮಾರ್, ಉಪಾಧ್ಯಕ್ಷ ಬಿ. ರಮೇಶ್, ಗೌರವ ಕಾರ್ಯದರ್ಶಿ ಎಂ.ಟಿ. ಮಲ್ಲಿಕಾರ್ಜುನ್, ಸಹ ಕಾರ್ಯದರ್ಶಿ ಸಿ. ಪ್ರಭುದೇವ್, ಖಜಾಂಚಿ ಪಿ. ನಟರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement