ಎಚ್.ಡಿ. ಕೋಟೆ: ಬಿಜೆಪಿ ವಿಜಯೋತ್ಸವ
ಸರಗೂರು: ನರೇಂದ್ರಮೋದಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಸರಗೂರಿನಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಸಂತೆ ಮಾಳದಿಂದ ಮೆರವಣಿಗೆ ಹೊರಟು, ನೃಪತುಂಗ ವೃತ್ತ, ಬಸವೇಶ್ವರ ರಸ್ತೆ, ಚಿಕ್ಕದೇವಮ್ಮ ವೃತ್ತ, ಮಹಾವೀರ ವೃತ್ತ ಮುಖಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಂದರಾಜು, ಸದಸ್ಯ ಜಯರಾಮ, ರೂಪಾನೇಮೀಶ್, ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು, ಮುಖಂಡರಾದ ಎಸ್.ಎನ್. ಸತ್ಯನಾರಾಯಣ, ರವಿಕುಮಾರ್, ಎಸ್.ಎಚ್. ಹನುಮನಾಯಕ, ರಾಮು, ಚನ್ನಪ್ಪ, ಎಸ್.ಎನ್. ದೇಂದ್ರಯ್ಯ, ಎಸ್. ನಾರಾಯಣ್, ಎನ್.ಎಸ್. ಪ್ರತಾಪ್, ಸುರೇಶ್‌ಜೈನ್, ಕುಮಾರ್, ಪ್ರಕಾಶ್, ಎಪಿಎಂಸಿ ಸದಸ್ಯ ಮಹದೇವ, ನೂರಾಳಸ್ವಾಮಿ, ಮಹೇಂದ್ರಕುಮಾರ್, ರವಿಗೌಡ, ನರಸಿಂಹ, ಭರತ್, ರಾಜು ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಇದ್ದರು.