ಮೀನುಗಾರರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಮೈಸೂರು: ಮೀನುಗಾರಿಕೆ ಮಹಾಮಂಡಲದ ಮಾಜಿ ಅಧ್ಯಕ್ಷ ಎಚ್.ಎನ್. ನಂಜೇಗೌಡ ಮತ್ತು ಅವರ ಬೆಂಬಲಿಗರು ಪರಿಶಿಷ್ಟ ವರ್ಗದ ಮೀನುಗಾರರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ನಾಯಕರ ಯುವ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.
ಇತ್ತೀಚೆಗೆ ನಂಜೇಗೌಡ ಮತ್ತು ಬೆಂಬಲಿಗರು ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದು, ಮೀನುಗಾರರಾದ ಮಾದನಾಯಕ, ವೆಂಕಟೇಶ್ ಅವರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.ಮಧುವನ ಚಂದ್ರು, ಜೆ. ರಾಮನಾಯಕ, ನಂಜುಂಡಪ್ಪ, ಕೆಆರ್ಎಸ್ ಪುಟ್ಟಣ್ಣ, ರಾಜಣ್ಣ ಇದ್ದರು.