ರಾಣಿಪ್ರಭಗೆ ದುರ್ಗಾಬಾಯಿ ಪ್ರಶಸ್ತಿ
ಮೈಸೂರು: ನಗರದ ಓಂ ಶ್ರೀ ಸಾಯಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಎಚ್.ಪಿ. ರಾಣಿಪ್ರಭ ಅವರಿಗೆ ಆಂಧ್ರ ಮಹಿಳಾ ಸಭಾದ ಸಂಸ್ಥಾಪಕಿ, ಪದ್ಮವಿಭೂಷಣ ಡಾ. ದುರ್ಗಾಬಾಯಿ ದೇಶಮುಖ್ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಎಸ್.ಆರ್. ನಾಯಕ್ ರಾಣಿಪ್ರಭ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಹೊ. ಶ್ರೀನಿವಾಸಯ್ಯ, ಪ್ರೊ.ಎಲ್. ವೇಣುಗೋಪಾಲ್ರೆಡ್ಡಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.