ಎಂಯುಸಿಎಸ್ಸಿಗೆ ಜಯ
ಮೈಸೂರು: ವೆಂಕಟೇಶ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಎಂಯುಸಿಎಸ್ಸಿ ತಂಡವು, ಅಗ್ರಹಾರಂ ಕ್ರಿಕೆಟ್ ಕ್ಲಬ್ ವಿರುದ್ಧ 341 ರನ್ಗಳ ಅಂತರದಲ್ಲಿ ಜಯಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ಎಂಯುಸಿಎಸ್ಸಿ ತಂಡವು ನಿಗದಿತ 50 ಓವರ್ಗೆ ಮೂರು ವಿಕೆಟ್ ನಷ್ಟಕ್ಕೆ 417 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ವೆಂಕಟೇಶ್ ಅಜೇಯ 198 ರನ್ ಸಿಡಿಸಿದರು. ಚಂಡನ್ನು 30 ಬಾರಿ ಬೌಂಡರಿ ಗೆರೆ ದಾಟಿಸಿದ ಅವರು ದ್ವಿಶತಕದ ಅಂಚಿನಲ್ಲಿದ್ದಾಗ ಪಂದ್ಯ ಮುಗಿಯಿತು. ಇವರಿಗೆ ಸತೀಶ್(30), ಹೇಮಂತ್(40) ಉತ್ತಮ ಸಾಥ್ ನೀಡಿದರು. ಇದಕ್ಕೆ ಪ್ರತಿಯಾಗಿ ಅಗ್ರಹಾರಂ ತಂಡ 29.5 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.
ಮತ್ತೊಂದು ಪಂದ್ಯದಲ್ಲಿ ಶ್ರೀಹರ್ಷ ಸೋಮಯಾಜಿ ಬಾರಿಸಿದ ಅರ್ಧ ಶತಕದ ನೆರವಿನಿಂದ ವಿಜಯ ಕ್ರಿಕೆಟ್ ಕ್ಲಬ್ ತಂಡ, ಮೈಸೂರು ಸಿಟಿ ಜಿಮ್ಖಾನ ತಂಡದ ವಿರುದ್ಧ 92 ರನ್ಗಳ ಅಂತರದಲ್ಲಿ ಜಯಗಳಿಸಿದೆ.
ವಿಜಯ ಕ್ರಿಕೆಟ್ ಕ್ಲಬ್ ತಂಡ 44.4 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ತಂಡದ ಪರ ಶ್ರೀಹರ್ಷ ಸೋಮಯಾಜಿ(89) ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಮೈಸೂರು ಸಿಟಿ ಜಿಮ್ಖಾನ ತಂಡವು 24.1 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 92 ರನ್ಗಳಿಸಿತು. ತಂಡದ ಪರ ಮೋಕ್ಷಿತ್(24) ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಕಾಲ ಸ್ಕ್ರೀಜ್ನಲ್ಲಿ ನಿಲ್ಲಲಿಲ್ಲ.
ಮತ್ತೊಂದು ಪಂದ್ಯದಲ್ಲಿ ಜಯನಗರ್ ಸ್ಪೋರ್ಟ್ಸ್ ಕ್ಲಬ್ ತಂಡವು, ವಿಜಯ ಕ್ರಿಕೆಟರ್ಸ್ ವಿರುದ್ಧ 11 ರನ್ಗಳಿಂದ ಜಯಗಳಿಸಿದ್ದಾರೆ. ಅಂತೆಯೆ ಸನ್ನಿಸೈಡ್ ಸಿಸಿ ತಂಡವು, ಜೈ ಹಿಂದ್ ಸಿಸಿಎ ತಂಡದ ವಿರುದ್ಧ 218 ರನ್ಗಳ ಅಂತರದಲ್ಲಿ ಜಯಗಳಿಸಿದೆ.