ರೇಸ್ ಕ್ಲಬ್ಗೆ ಪ್ರತ್ಯೇಕ ಟರ್ಫ್ ಮಾನ್ಯತೆ
ಮೈಸೂರು: ಬೆಂಗಳೂರು ರೇಸ್ ಕ್ಲಬ್ನ ನಿಯಮದಡಿ ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ರೇಸ್ ಕ್ಲಬ್ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದುಕೊಂಡಿದ್ದು, ಪ್ರತ್ಯೇಕ ಟರ್ಫ್ ಪ್ರಾಧಿಕಾರ ರಚಿಸಿಕೊಂಡಿದೆ. ನೂತನ ಟರ್ಫ್ ಪ್ರಾಧಿಕಾರ ರಚನೆಯಾದ ಬಳಿಕ ಬೇಸಿಗೆ ರೇಸುಗಳು ಆರಂಭವಾಗಲಿವೆ ಎಂದು ಮೈಸೂರು ರೇಸ್ ಕ್ಲಬ್ನ ಅಧ್ಯಕ್ಷ ಡಾ.ಡಿ. ಸತ್ಯನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು ರೇಸ್ ಕ್ಲಬ್ನಲ್ಲಿ ಈಗ ಕುದುರೆಗಳ ಸಂಖ್ಯೆ ಹೆಚ್ಚಳ, ಮೂಲಸೌಲಭ್ಯ, ಕುದುರೆಲಾಯ, ಮೈದಾನ, ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಭಾರತೀಯ ಟರ್ಫ್ ಪ್ರಾಧಿಕಾರ ಒಕ್ಕೂಟವು ನಮ್ಮ ಕ್ಲಬ್ಗೆ ಸ್ವಾಯತ್ತತೆ ನೀಡಿದೆ ಎಂದು ಅವರು ತಿಳಿಸಿದರು. ಕುದುರೆ ಪಂದ್ಯದಲ್ಲಿ ಬಿದ್ದು ಗಾಯಗೊಳ್ಳುವ ಜಾಕಿಗಳಿಗೆ ನೀಡುವ ಪರಿಹಾರವನ್ನು ಹೆಚ್ಚಿಸಲಾಗಿದೆ. ಈ ಮೊತ್ತವನ್ನು ಮೈಸೂರು ರೇಸ್ ಕ್ಲಬ್ ವತಿಯಿಂದ ನೀಡಲಾಗುತ್ತದೆ ಎಂದರು.
ಬೇಸಿಗೆ ರೇಸುಗಳು: ಟರ್ಫ್ ಪ್ರಾಧಿಕಾರ ಉದ್ಘಾಟನಾ ಕಪ್, ಮೇ 28ಕ್ಕೆ ದಿ ಎಫ್.ಬಿ. ಶರ್ಮಾ ಮೆಮೋರಿಯಲ್ ಟ್ರೋಫಿ, ಜೂ.4ಕ್ಕೆ ದಿ ಜೆ.ಕೆ. ವ್ಯಾನ್ ಇಂಜಿನ್ ಸ್ಮಾರಕ ಟ್ರೋಫಿ, ಜೂ.11 ರಂದು ದಿ ಎಚ್ಆರ್ಸಿ ಟ್ರೋಫಿ, ಜೂ.12 ರಂದು ದಿ ಸ್ಟೀವಾರ್ಡ್ಸ್ ಟ್ರೋಫಿ ಹಾಗೂ ಜು.29 ರಂದು ಮೈಸೂರು ರೇಸ್ ಕ್ಲಬ್ ಮಿಲಿಯನ್. ಮೈಸೂರು ರೇಸ್ ಕ್ಲಬ್ನ ಕಾರ್ಯದರ್ಶಿ ಕೆ.ಜಿ. ಅನಂತರಾಜ್ ಅರಸ್, ಪದಾಧಿಕಾರಿಗಳಾದ ಬಿ.ಯು. ಚೆಂಗಪ್ಪ, ಎಚ್.ಕೆ. ರೋಹಿಣಿಕುಮಾರ್ ಬಾಬು ಇದ್ದರು.