ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭ್ಯರ್ಥಿಗಳ ವೆಚ್ಚ ಪರಿಶೀಲನೆಗೆ ನೇಮಕ

Lingaraj Badiger
Updated On : 2 Apr 2013, 11:20 am

ಕನ್ನಡಪ್ರಭ ವಾರ್ತೆ ರಾಯಚೂರು  ಏ.1
ಜಿಲ್ಲೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಮಾಡುವ ವೆಚ್ಚದ ಮೇಲೆ ನಿಗಾಯಿರಿಸುವ ಹಾಗೂ ದಿನವೂ ವೆಚ್ಚದ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ನೇಮಿಸಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಜಿಪಂ ಲೆಕ್ಕಾಧಿಕಾರಿ ಕೃಷ್ಣಪ್ಪ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅದೇ ರೀತಿ ರಾಯಚೂರು ನಗರ ವಿಧಾನಸಭೆ ಕ್ಷೇತ್ರಕ್ಕೆ ಲೆಕ್ಕ ಪರಿಶೋಧನಾಧಿಕಾರಿ ಖಾಜಾ ಅಬೀದ್ ಹುಸೇನ್, ಮಾನವಿ ವಿಧಾನಸಭೆ ಕ್ಷೇತ್ರಕ್ಕೆ  ಮಾನವಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಹರೀಶ್, ದೇವದುರ್ಗ ವಿಧಾನಸಭೆ ಕ್ಷೇತ್ರಕ್ಕೆ ರಾಯಚೂರು ಬಿಎಸ್ಸೆನ್ನೆಲ್ ಮುಖ್ಯ ಲೆಕ್ಕಾಧಿಕಾರಿ ಕರಿಯಪ್ಪ, ಲಿಂಗಸ್ಗೂರು ವಿಧಾನಸಭೆ ಕ್ಷೇತ್ರಕ್ಕೆ ರಾಯಚೂರು ಸ್ಥಳೀಯ ಲೆಕ್ಕ ಪರಿಶೋಧನ ಕಚೇರಿಯ ಆಡಿಟರ್ ಪರಸಪ್ಪ ಅಮರಾವತಿ ಅವರನ್ನು ಮೇಲ್ವಿಚಾರಕಾಧಿಕಾರಿಯಾಗಿ ನೇಮಿಸಿದ್ದಾರೆ.
ಅದೇ ರೀತಿ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಸಿಂಧನೂರು ನಗರಸಭೆಯ ಲೆಕ್ಕ ಅಧೀಕ್ಷಕ ಅಬ್ದುಲ್ ಅವರನ್ನು ವೆಚ್ಚದ ಮೇಲ್ವಿಚಾರಕರಾಗಿ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ  ಸಿಂಧನೂರು ನಂ. 3 ಕಾಲುವೆ ವಿಭಾಗದ ಪರಿಶೋಧನಾಧಿಕಾರಿ ವೆಂಕಟೇಶ ಮಠದ್ ಅವರನ್ನು ಮೇಲ್ವಿಚಾರಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಚುನಾವಣೆ ವೆಚ್ಚಗಳ ಮೇಲ್ವಿಚಾರಕ ವಿಭಾಗಗಳಿಗೆ ನೇಮಕಗೊಂಡ ಅಧಿಕಾರಿಗಳು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ದಿನವೂ ಭರಿಸುವ ಚುನಾವಣಾ ವೆಚ್ಚಗಳ ಬಗ್ಗೆ ಪರಿಶೀಲನೆ ಮಾಡುವುದು, ಯಾವುದೇ ಅಭ್ಯರ್ಥಿಗಳ ಏಜೆಂಟರು ಚುನಾವಣಾ ವೆಚ್ಚಗಳನ್ನು ಪರಿಶೀಲನೆಗೆ ನೀಡದಿದ್ದಲ್ಲಿ ಚುನಾವಣಾ ವೀಕ್ಷಕರ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಘೋಷ್ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement