ಕಾಲುವೆಯಲ್ಲಿ ಶವ ಪತ್ತೆ
ರಾಯಚೂರು: ಸಿಂಧನೂರು ತಾಲೂಕಿನ ಪರಾಪುರ ಗ್ರಾಮದ ಬಳಿಯ ಎಡದಂಡೆ ಕಾಲುವೆಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮೃತನನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಪ್ಪನವಳ್ಳಿ ಕ್ಯಾಂಪ್ನ ರಾಮಚಂದ್ರ (18) ಎಂದು ಗುರುತಿಸಲಾಗಿದೆ. ಈತ ಹೋಳಿ ಹಬ್ಬದ ನಂತರದಲ್ಲಿ ಸ್ನಾನಕ್ಕೆಂದು ಎಡದಂಡೆ ಕಾಲುವೆಗೆ ತೆರಳಿದ್ದು, ಆನಂತರ ಮನೆಗೆ ಮರಳಿರಲಿಲ್ಲ. ಈತನ ಬಗ್ಗೆ ಕುಟುಂಬದವರು ಕಾಲುವೆಯ ಮೇಲೆ ತೆರಳಿ ಹುಡುಕಿದ್ದು ಮೃತನ ಶವವು ಮಾನವಿ ತಾಲೂಕಿನ ಪರಾಪುರ ಗ್ರಾಮದ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅನಾರೋಗ್ಯ: ವ್ಯಕ್ತಿ ಸಾವು
ರಾಯಚೂರು: ಮಾನವಿ ತಾಲೂಕಿನ ಹಿರೇಹಣಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತೀವ್ರ ಅನಾರೋಗ್ಯದಿಂದ ಬಳಲಿ ಸಾವಿಗೀಡಾಗಿದ್ದಾನೆ.
ಮೃತನನ್ನು ಮೂಕಪ್ಪ ಎಂದು ಗುರುತಿಸಲಾಗಿದೆ. ಈತ ಕಳೆದ 10 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿದ್ದು, ಗ್ರಾಮದ ಮಾರೆಮ್ಮ ದೇವಸ್ಥಾನದಲ್ಲಿಯೇ ಇರುತ್ತಿದ್ದ. ಈಚೆಗೆ ತೀವ್ರ ಅನಾರೋಗ್ಯದಿಂದ ಬಳಲಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.