ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರು: ಜಿಲ್ಲಾಡಳಿತಕ್ಕೆ ಮನವಿ

Lingaraj Badiger
Updated On : 2 Apr 2013, 11:21 am

ದೇವದುರ್ಗ: ಪಟ್ಟಣದ ವಾರ್ಡ್ ಸಂಖ್ಯೆ 9ರಲ್ಲಿ ಕುಡಿಯುವ ನೀರಿನ ತೊಂದರೆಯಿದ್ದು ಕೂಡಲೇ ನಿವಾರಿಸುವಂತೆ ಮಾದಿಗ ಮೀಸಲಾತಿ ಹೋರಾಟ ತಾಲೂಕು ಸಮಿತಿ ಒತ್ತಾಯಿಸಿದೆ. ಈ ಕುರಿತು ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಗೌತಮ್ ಓಣಿಯ ಬೆಟ್ಟದ ಮೇಲೆ ಪರಿಶಿಷ್ಟ ಜನಾಂಗದವರು ಸುಮಾರು ವರ್ಷಗಳಿಂದ ವಾಸವಾಗಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಕುಡಿಯಲು ಮತ್ತು ಬಳಕೆಗೆ ನೀರು ದೊರೆಯುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಬೆಟ್ಟದಿಂದ ಕೆಳಗಿಳಿದು ನೀರು ಕೊಂಡೊಯ್ಯುವಂಥ ಸ್ಥಿತಿಯಿದೆ ಎಂದು ದೂರಿದರು. ಈ ಕುರಿತು ಪುರಸಭೆಗೆ ದೂರಿತ್ತಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೊರಾಟ ಸಮಿತಿಯ ಮರಿಯಪ್ಪ ಕಡೆಮನಿ, ವೆಂಕಟೇಶ, ರಾಮಪ್ಪ, ಶಿವಪ್ಪ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement