ದೇವದುರ್ಗ; 91 ವಿದ್ಯಾರ್ಥಿಗಳು ಗೈರು
ದೇವದುರ್ಗ: ತಾಲೂಕಿನಲ್ಲಿ ಸೋಮವಾರದಿಂದ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾದರು. ತಾಲೂಕಿನಲ್ಲಿ 8 ಪರೀಕ್ಷೆ ಕೇಂದ್ರ ಸ್ಥಾಪಿಸಿದ್ದು, 1340 ಬಾಲಕರು, 924ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿದ್ದು, 1287 ಬಾಲಕರು, 886 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. 91 ಜನ ಗೈರು ಹಾಜರಾಗಿದ್ದರು.
ಮಸ್ಕಿ; 25 ಗೈರು
ಮಸ್ಕಿ: ಪ್ರಥಮ ಭಾಷೆಯ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಒಟ್ಟು 537 ವಿದ್ಯಾರ್ಥಿಗಳ ಪೈಕಿ 512 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 25 ವಿದ್ಯಾರ್ಥಿಗಳು ಗೈರು ಹಾಜರಾದರು. ಒಟ್ಟು 23 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಸ್ಥಳೀಯ ಹಾಗೂ ಸಮೀಪದ ಮಾರಲದಿನ್ನಿ, ಅಂಕುಶದೊಡ್ಡಿ, ಅಡವಿಭಾವಿ ತಾಂಡಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.