ನಕಲು ತಡೆಗೆ ಪೊಲೀಸ್ ಬಂದೋಬಸ್ತ್
ಮುದಗಲ್: ಪಟ್ಟಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ನಕಲು ಮಾಡಲು ಯಾವುದೇ ಅವಕಾಶ ನೀಡದೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ ಎಂದು ಪರೀಕ್ಷಾ ಕೇಂದ್ರಗಳ ಮಖ್ಯಸ್ಥರಾದ ಬಾಲಚಂದ್ರ ದಾಸರ್, ಎಂ.ಎಚ್. ಗೌಡರ ತಿಳಿಸಿದರು.
ಸ್ಥಳೀಯ ಕ್ರೈಸ್ತ ಜ್ಯೋತಿ ಪ್ರೌಢಶಾಲೆಯಲ್ಲಿ 203ಗಂಡು, 209ಹೆಣ್ಣು ಸೇರಿ ಒಟ್ಟು 402 ವಿದ್ಯಾರ್ಥಿಗಳು 17 ಬ್ಲಾಕ್‌ಗಳಲ್ಲಿ ಪರೀಕ್ಷೆ ಬರೆಯಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. 26 ಶಿಕ್ಷಕರು ಮತ್ತು 4 ಜನ ಸಿಬ್ಬಂದಿಗಳನ್ನು ನೀಡಲಾಗಿದೆ. ಅದೇ ರೀತಿ ಸರ್ಕಾರಿ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 281ಗಂಡು, 169ಹೆಣ್ಣು ಮಕ್ಕಳು ಸೇರಿ ಒಟ್ಟು 450 ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದರು. 28 ಕೊಠಡಿ ಮೇಲ್ವಿಚಾರಕರು, 4 ಸಿಬ್ಬಂದಿ ಹಾಜರಿದ್ದರು ಎಂದು ತಿಳಿಸಿದರು. 16 ಪ್ರೌಢಶಾಲೆಗಳ ಒಟ್ಟು 852 ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆ ಬರೆದಿದ್ದಾರೆ ಎಂದರು.
ನಕಲು ತಡೆಯಲು ಪಿಎಸ್‌ಐ ಬಸವರಾಜ ಬಿಸನಕೊಪ್ಪ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.