ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೇಣುಕಾಚಾರ್ಯರ ಜಯಂತಿ 4ರಂದು

Lingaraj Badiger
Updated On : 2 Apr 2013, 11:24 am

ಮಸ್ಕಿ: ಪಟ್ಟಣದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಗುರುವಾರ ದಿನಾಂಕ ಏ.4 ರಂದು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಹಾಗೂ ಜನ ಜಾಗೃತಿ, ಧರ್ಮಸಭೆ ಆಯೋಜಿಸಲಾಗಿದೆ. ಗಚ್ಚಿನ ಮಠದಲ್ಲಿ ಬೆಳಗ್ಗೆ 5.30ಕ್ಕೆ ಪಂಚಾಚಾರ್ಯರ ಧ್ವಜಾರೋಹಣ ಮತ್ತು ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು. ಬೆಳಗ್ಗೆ 8.30ಕ್ಕೆ ಜಗದ್ಗುರು ರೇಣುಕಾಚಾರ್ಯರ ಅಲಂಕೃತ ಭಾವಚಿತ್ರ ಸಕಲ ವಾದ್ಯ ವೈಭವಗಳೊಂದಿಗೆ ಸುಮಂಗಲಿಯರಿಂದ ಕಳಸ ಕನ್ನಡಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ಜರುಗುವುದು. ಸಂಜೆ 5ಕ್ಕೆ ಜನಜಾಗೃತಿ ಧರ್ಮಸಭೆ ನಡೆಯಲಿದೆ. ತೆಕ್ಕಲಕೋಟೆಯ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಸ್ಕಿಯ ಗಚ್ಚಿನ ಹಿರೇಮಠದ ರುದ್ರಸ್ವಾಮಿಗಳು (ಮರಿದೇವರು) ಸಾನ್ನಿಧ್ಯ ವಹಿಸಲಿದ್ದಾರೆ. ರೌಡಕುಂದಾದ ವೆಂಕಟಗಿರಿ ಕ್ಯಾಂಪ್ ಸಿದ್ದಾಶ್ರಮದ  ಸಿದ್ದರಾಮ ಶರಣರು ಉಪನ್ಯಾಸ ನೀಡಲಿದ್ದಾರೆಂದು ಸಮಾಜ ತಿಳಿಸಿದೆ.
ಬಿಜೆಪಿಗೆ ಸೇರ್ಪಡೆ
ಸಿಂಧನೂರು: ನಗರದಿಂದ ಗ್ರಾಮೀಣ ಮಟ್ಟದವರೆಗೂ ಬಿಜೆಪಿ ಸಂಘಟಿಸುವಲ್ಲಿ ಯುವಕರು ಪಣ ತೊಡಗಬೇಕು ಎಂದು ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಕೋಟೇಶ್ವರರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement