ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಟ್ಯಾಂಕರ್ ಬಾಡಿಗೆ ಹಣ ಪಾವತಿಸಲು ಗ್ರಾಮಸ್ಥರ ಆಗ್ರಹ

Lingaraj Badiger
Updated On : 3 Apr 2013, 11:28 am

ಲಿಂಗಸ್ಗೂರು: ತಾಲೂಕಿನ ಕಡ್ಡೋಣಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕರ್ ಬಾಡಿಗೆ ಹಣ ನೀಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಎನ್.ಬಿ. ಪಾಟೀಲರನ್ನು ಒತ್ತಾಯಿಸಿದರು.
ರೋಡಲಬಂಡಾ(ತವಗ) ಗ್ರಾಪಂ ವ್ಯಾಪ್ತಿಯ ಕಡ್ಡೋಣಿ ಗ್ರಾಮಕ್ಕೆ ಕಳೆದ ಮೂರು ತಿಂಗಳಿಂದ ಟ್ಯಾಂಕರ್ ಮೂಲಕ ದಿನಕ್ಕೆ ಮೂರು ಬಾರಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಕಳೆದ 3 ತಿಂಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದಾರೆ. ಆದರೆ ಬಾಡಿಗೆ ಹಣ ಪಾವತಿ ಮಾಡದ ಕಾರಣ ಟ್ರ್ಯಾಕ್ಟರ್ ಮಾಲೀಕರು ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹಣ ಪಾವತಿಸುವಂತೆ ಗ್ರಾಪಂ ಪಿಡಿಒ ಅವರಿಗೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ. ಕೂಡಲೇ ಹಣ ಪಾವತಿಸಲು ಸೂಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹನುಮಂತ, ಮುಖಂಡರಾದ ಮಲ್ಲಿಕಾರ್ಜುನ, ಮಲ್ಲಯ್ಯ ಸ್ವಾಮಿ, ಈರಣ್ಣ ಕಡ್ಡೋಣಿ, ಅಲ್ಲಾಭಕ್ಷ, ಭೀಮಣ್ಣ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement